ಟೀಂ ಇಂಡಿಯಾ ಮ್ಯಾನೆಜರ್ ಗೆ ದಂಡ
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಮ್ಯಾನೆಜರ್ ವಿನೋದ್ ಪಾಡ್ಕೆ ಅವರು ಅಂಪೈರ್ ವಿನೀತ್ ಕುಲಕರ್ಣಿ...
ಇಂದೋರ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಮ್ಯಾನೆಜರ್ ವಿನೋದ್ ಪಾಡ್ಕೆ ಅವರು ಅಂಪೈರ್ ವಿನೀತ್ ಕುಲಕರ್ಣಿ ವಿರುದ್ಧ ಕೆಟ್ಟ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರಿಗೆ ದಂಡ ವಿಧಿಸಲಾಗಿದೆ. ಪಾಡ್ಕೆ ಅವರು ಐಸಿಸಿ ಆಟಗಾರರ ಮತ್ತು ಸಹಾಯಕ ಸಿಬ್ಬಂದಿ ನಿಯಮ 2.1.3ಅನ್ನು ಉಲ್ಲಂಘಿಸಿರುವುದು ಸಾಬೀತಾಗಿದೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿನ ಘಟನೆಗೆ ಸಂಬಂಧಿಸಿದಂತೆ ಆಟಗಾರ, ಸಹಾಯಕ ಸಿಬ್ಬಂದಿ, ಪಂದ್ಯದ ಅಧಿಕಾರಿಗಳ ಬಗ್ಗೆ ಸಾರ್ವಜನಿ ಕವಾಗಿ ಅಸಭ್ಯ ಹೇಳಿಕೆ ನೀಡುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಪಾಡ್ಕೆ ಅವರಿಗೆ ಪಂದ್ಯದ ಸಂಭಾವನೆಯ ಶೇ.40ರಷ್ಟು ದಂಡ ವಿಧಿಸಲಾಗಿದೆ.