ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇಂಗ್ಲೆಂಡ್‍ಗೆ ಬ್ಯಾಡ್ ಲಕ್

ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ಜಯದ ಹೊಸ್ತಿಲಿಗೆ ಬಂದುನಿಂತರೂ ಮಂದ ಬೆಳಕು ಅದರ ಗೆಲುವಿನ ಆಸೆಗೆ ತಣ್ಣೀರೆರಚಿತು..

ಇಂಗ್ಲೆಂಡ್ ತಂಡ
Shilpa D
Updated On : 18 Oct 2015, 10:34 am

ಅಬುಧಾಬಿ: ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ಜಯದ ಹೊಸ್ತಿಲಿಗೆ ಬಂದುನಿಂತರೂ ಮಂದ ಬೆಳಕು ಅದರ ಗೆಲುವಿನ ಆಸೆಗೆ ತಣ್ಣೀರೆರಚಿತು. ಪಂದ್ಯದ ಕೊನೇ ದಿನವಾದ ಶನಿವಾರದಂದು ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ ನಲ್ಲಿ  598ಕ್ಕೆ 8 ರನ್‍ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.

ನಂತರ ಪಾಕಿಸ್ತಾನ ತಂಡವನ್ನು ಎರಡನೇ ಇನಿಂಗ್ಸ್‍ನಲ್ಲಿ 173 ರನ್ ಗಳಿಗೆ ಆಲೌಟ್ ಮಾಡಿ ಗೆಲ್ಲಲು ಕೇವಲ 99 ರನ್‍ಗಳ ಗುರಿ ಪಡೆಯಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್, ಚುರುಕಿನ ಬ್ಯಾಟಿಂಗ್ ಮಾಡಿ 11 ಓವರ್‍ಗಳಲ್ಲಿ 4 ವಿಕೆಟ್‍ಗೆ 74 ರನ್ ದಾಖಲಿಸಿತ್ತು. ದಿನದಾಟದಲ್ಲಿ ಇನ್ನು 9 ಓವರ್‍ಗಳ ಆಟ ಬಾಕಿ ಉಳಿದಿದ್ದಾಗ ಇಂಗ್ಲೆಂಡ್‍ಗೆ ಕೇವಲ 25 ರನ್ ಮಾತ್ರ ಬೇಕಿತ್ತು. ಆದರೆ ಮಂದ ಬೆಳಕಿನಿಂದ ಅಂಪೈರ್ ಆಟ ನಿಲ್ಲಿಸಿ ಪಂದ್ಯವನ್ನು ಡ್ರಾ ಎಂದು ಘೋಷಿಸಿದರು.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 523ಕ್ಕೆ 8 (ಡಿಕ್ಲೇರ್) ಮತ್ತು 173; ಇಂಗ್ಲೆಂಡ್ 598ಕ್ಕೆ 9 (ಡಿಕ್ಲೇರ್) ಮತ್ತು 74ಕ್ಕೆ 4 (ರೂಟ್ ಅಜೇಯ 33, ಬೇರ್‍ಸ್ಟೊ 15, ಮಲಿಕ್ 25ಕ್ಕೆ 2).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments