ಜೋಹರ್ ಬಹ್ರು: ಆಕ್ರಮಣ ಹಾಗೂ ಸ್ಥಿರ ಪ್ರದರ್ಶನ ಮುಂದುವರಿಸಿರುವ ಭಾರತ 21 ವರ್ಷದೊಳಗಿನವರ ಹಾಕಿ ತಂಡ, ಸುಲ್ತಾನ್ ಜೋಹರ್ ಕಪ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದು, ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಬಾರಿಸುವ ಕನಸಿನೊಂದಿಗೆ ಫೈನಲ್‍ಗೆ ಸಜ್ಜಾಗಿದೆ.
ಸತತ ಎರಡು ಆವೃತ್ತಿಯಲ್ಲಿ ಚಾಂಪಿಯನ್ ಆಗಿರುವ ಭಾರತ, ಶನಿವಾರ ನಡೆದ ಆಸ್ಟ್ರೇಲಿಯಾ ವಿರುದ್ಧ ಅಂತಿಮ ಲೀಗ್ ಪಂದ್ಯದಲ್ಲಿ 1-0 ಯಿಂದ ಜಯಿಸಿದ್ದು, ಭಾನುವಾರ ಬ್ರಿಟನ್ ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ಕಾದಾಟ ನಡೆಸಲಿದೆ. ಲೀಗ್ ಹಂತದಲ್ಲಿ ಬ್ರಿಟನ್ ಎದುರು 3-4 ಗೋಲುಗಳಿಂದ ಸೋತಿದ್ದ ಭಾರತ ತಂಡ,ಫೈನಲ್‍ನಲ್ಲಿ ಎಚ್ಚರಿಕೆಯಿಂದ ಸೆಣಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.