ನವದೆಹಲಿ: ಶಿವಸೇನೆಯ ಕಾರ್ಯಕರ್ತರು ಮುಂಬಯಿಯಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪಿಸಿಬಿ-ಬಿಸಿಸಿಐ ಸಭೆಯನ್ನು ನಾಳೆ ದೆಹಲಿಯ ಬಿಸಿಸಿಐ ಕಚೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ .
ಪಾಕಿಸ್ತಾನ ಜೊತೆಗೆ ಕ್ರಿಕೆಟ್ ಸರಣಿ ನಡೆಸಲು ಮುಂದಾಗಿರುವ ಬಿಸಿಸಿಐ ನಿರ್ಧಾರವನ್ನು ವಿರೋಧಿಸಿ ಶಿವಸೇನೆ ಕಾರ್ಯಕರ್ತರು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೂ ಮುತ್ತಿಗೆ ಹಾಕಿ, ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದು ಯಾವುದೇ ಕಾರಣಕ್ಕೂ ಭಾರತ ಪಾಕ್ ನಡುವೆ ಕ್ರಿಕೆಟ್ ಸರಣಿ ಆಯೋಜಿಸಬಾರದು ಎಂದು ಆಗ್ರಹಿಸಿದ್ದಾರೆ.
ಶಿವಸೇನೆಯ ನೂರಾರು ಕಾರ್ಯಕರ್ತರು ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರಿಯಾರ್ ಖಾನ್ ಅವರ ವಿರುದ್ಧ ಗೋ ಬ್ಯಾಕ್ ,ಗೋ..ಎಂದು ಘೋಷಣೆ ಕೂಗಿದರು.
ಭಾರತ-ಪಾಕ್ ಕ್ರಿಕೆಟ್ ಸರಣಿ ನಡೆಸುವ ಸಲುವಾಗಿ ಶಶಾಂಕ್ ಮನೋಹರ್ ಮತ್ತು ಶಹರಿಯಾರ್ ಖಾನ್ ಅವರ ಮಾತುಕತೆ ನಿಗದಿಯಾಗಿತ್ತು.