ಸುಲ್ತಾನ್ ಜೊಹರ್ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಪೆನಾಲ್ಟಿ ಶೂಟೌಟ್‍ನಲ್ಲಿ 5-6 ಗೋಲುಗಳ ಅಂತರದಲ್ಲಿ ಬ್ರಿಟನ್ ವಿರುದ್ಧ ಪರಾಭವಗೊಂಡಿತು(ಚಿತ್ರ ಕೃಪೆ: ಹಾಕಿ ಇಂಡಿಯಾ)
ಜೋಹರ್ ಬಹ್ರು: ರೋಚಕ ಹೋರಾಟ ನಡೆಸಿದರೂ ಅಂತಿಮ ಹಂತದ ಶೂಟೌಟ್‍ನ ಅಂತಿಮ ಕ್ಷಣದಲ್ಲಿ ಎಡವಿದ ಭಾರತ 21 ವರ್ಷದೊಳಗಿನವರ ಹಾಕಿ ತಂಡ ಸುಲ್ತಾನ್ ಜೊಹರ್ ಕಪ್ ಹಾಕಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಪೆನಾಲ್ಟಿ ಶೂಟೌಟ್‍ನಲ್ಲಿ 5-6 ಗೋಲುಗಳ ಅಂತರದಲ್ಲಿ ಬ್ರಿಟನ್ ವಿರುದ್ಧ ಪರಾಭವಗೊಂಡಿತು. ಕಳೆದ ಬಾರಿ ಫೈನಲ್ ನಲ್ಲಿ ಬ್ರಿಟನ್ ವಿರುದ್ಧವೇ ಭಾರತ ಜಯ ದಾಖಲಿಸಿತ್ತು. ಪಂದ್ಯದ ಪೂರ್ಣ ಅವಧಿ ಮುಕ್ತಾಯಗೊಂಡಾಗ ಇತ್ತಂಡಗಳು 2-2 ಗೋಲುಗಳ ಸಮಬಲ ಸಾಧಿಸಿದವು.
ಭಾರತ ತಂಡದ ಪರ ಹರ್ಮನ್‍ಪ್ರೀತ್ ಸಿಂಗ್ 12ನೇ ಮತ್ತು ಗುರ್ಜಂತ್ ಸಿಂಗ್ 42ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಬ್ರಿಟನ್ ತಂಡದ ಪರ ಲ್ಯೂಕ್ ಟೇಲರ್ 5ನೇ ಮತ್ತು ಜ್ಯಾಕ್ ಟರ್ನರ್ 46ನೇ ನಿಮಿಷದಲ್ಲಿ ಗೋಲು ಪಡೆದರು. ಹಾಗಾಗಿ ಶೂಟೌಟ್ ಮೊರೆ ಹೋಗಲಾಯಿತು.
ತಲಾ 5 ಐದು ಅವಕಾಶಗಳ ಪೈಕಿ ಉಭಯ ತಂಡಗಳು ಮತ್ತೆ 2-2ರ ಸಮಬಲ ಸಾಧಿಸಿದವು. ಹೆಚ್ಚುವರಿಯಾಗಿ ಉಭಯ ತಂಡಗಳಿಗೆ ತಲಾ 5 ಅವಕಾಶ ನೀಡಲಾಯಿತು. ಈ ವೇಳೆ ಭಾರತ ಮೊದಲ ಅವಕಾಶದಲ್ಲಿ ಗೋಲು ದಾಖಲಿಸಿದರೆ, ಎರಡನೇ ಅವಕಾಶದಲ್ಲಿ ವಿಫಲವಾಯಿತು. ಬ್ರಿಟನ್ ಸತತವಾಗಿ ಎರಡು ಗೋಲು ದಾಖಲಿಸಿದ ಪರಿಣಾಮ ಭಾರತ ಸೋಲು ಕಂಡಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos