ಅಮಿತ್ ಮಿಶ್ರಾ 
ಕ್ರೀಡೆ

ಗೆಳತಿ ವಂದನಾ ಮೇಲೆ ಹಲ್ಲೆ: ಕ್ರಿಕೆಟಿಗ ಅಮಿತ್ ಮಿಶ್ರಾಗೆ ಬೆಂಗಳೂರು ಪೊಲೀಸರ ನೋಟಿಸ್

ಟೀಂ ಇಂಡಿಯಾದ ಲೆಗ್ ಬ್ರೇಕ್ ಸ್ಪಿನ್ನರ್ ಅಮಿತ್ ಮಿಶ್ರಾ ವಿರುದ್ಧ ಬೆಂಗಳೂರು ಮೂಲದ ಬಾಲಿವುಡ್ ನಿರ್ಮಾಪಕಿ ವಂದನಾ ಎಂಬುವರು ದೂರು ನೀಡಿದ್ದು, ವಿಚಾರಣೆಗೆ...

ಬೆಂಗಳೂರು: ಟೀಂ ಇಂಡಿಯಾದ ಲೆಗ್ ಬ್ರೇಕ್ ಸ್ಪಿನ್ನರ್ ಅಮಿತ್ ಮಿಶ್ರಾ ವಿರುದ್ಧ ಬೆಂಗಳೂರು ಮೂಲದ ಬಾಲಿವುಡ್ ನಿರ್ಮಾಪಕಿ ವಂದನಾ ಎಂಬುವರು ದೂರು ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಬೆಂಗಳೂರು ಪೊಲೀಸರು ಮಿಶ್ರಾಗೆ ನೋಟಿಸ್ ಜಾರಿ ಮಾಡಿದ್ದಾರೆ. 
ದೆಹಲಿ ಮೂಲದ ಅಂತಾರಾಷ್ಟ್ರೀಯ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ತಮ್ಮ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ವಂದನಾ ಅವರು ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಮಿಶ್ರಾಗೆ ನೋಟಿಸ್ ನೀಡಿದ್ದು, ಒಂದು ವಾರ ಕಾಲಾವಕಾಶ ನೀಡಿದ್ದಾರೆ. ಒಂದು ವೇಳೆ ವಿಚಾರಣೆಗೆ ಗೈರಾದರೆ ಬಂಧಿಸುವ ಸಾಧ್ಯತೆ ಇದೆ. 
ವಂದನಾ ಅವರು ದೂರಿನಲ್ಲಿ ದಕ್ಷಿಣ ಆಫ್ರಿಕಾದ ಟೂರ್ನಿಗೂ ಮುನ್ನಾ ಬೆಂಗಳೂರಿನಲ್ಲಿ ಪ್ರಾಕ್ಟಿಸ್ ಗೆ ಬಂದಿದ್ದರು. ಈ ವೇಳೆ ಬೆಂಗಳೂರಿನ ರೆಡಿಡೆನ್ಸಿಯಲ್ಲಿರುವ ರಿಟ್ಜ್ ಕಾರ್ಲಟನ್ ಹೊಟೇಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಮೊದಲು ನಮ್ಮ ನಡುವೆ ವಾಗ್ವಾದ ನಡೆಯಿತು. ಆನಂತರ ಇಬ್ಬರ ನಡುವೆ ಘರ್ಷಣೆ ನಡೆಯಿತು. ಕೋಪಗೊಂಡ ಅಮಿತ್ ಮಿಶ್ರಾ ಟೀ ಕೆಟಲ್ ಮೂಲಕ ಹಲ್ಲೆ ಮಾಡಿದರು ಎಂದು ದೂರಿದ್ದಾರೆ.
ನಾವಿಬ್ಬರು ನಾಲ್ಕೈದು ವರ್ಷದಿಂದ ಅನ್ಯೋನ್ಯವಾಗಿದ್ದವು. ಆದರೆ ಅಮಿತ್ ಮಿಶ್ರಾ ಇದ್ದಕ್ಕಿದ್ದಂತೆ ಅಂತರ ಕಾಯ್ದುಕೊಂಡಿದ್ದು, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಏಕಾಏಕಿ ಕೋಪಗೊಂಡು ಹಲ್ಲೆ ಮಾಡಿದರು  ಎಂಬುದು ವಂದನಾರ ಆರೋಪವಾಗಿದೆ.
ಈ ಸಂಬಂಧ ಅಮಿತ್ ಮಿಶ್ರಾ ವಿರುದ್ಧ ಐಪಿಸಿ ಸೆಕ್ಷನ್ 323, 324, 354ರ ಅಡಿಯಲ್ಲೇ ಕೇಸ್ ದಾಖಲಿಸಿರುವ ಅಶೋಕನಗರ ಪೊಲೀಸರು ಮಿಶ್ರಾಗೆ ನೋಟಿಸ್ ನೀಡಿದ್ದಾರೆ. ಜತೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೂ ಪ್ರಕರಣ ಕುರಿತಂತೆ ನೋಟಿಸ್ ರವಾನಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT