ಸೈನಾ ನೆಹ್ವಾಲ್ ಮತ್ತು ಸಿಂಧು 
ಕ್ರೀಡೆ

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್, ಪ್ರಶಸ್ತಿ ಮೇಲೆ ಸೈನಾ, ಸಿಂಧು ಕಣ್ಣು

ಮಂಗಳವಾರದಿಂದ ಶುರುವಾಗುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಶ್ವದ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಡೆನ್ಮಾರ್ಕ್ ಓಪನ್‍ನಲ್ಲಿ ರನ್ನರ್‍ಅಪ್...

ಇಂದಿನಿಂದ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆರಂಭ ಅರ್ಹತಾ ಸುತ್ತಿನೊಂದಿಗೆ ಮಂಗಳವಾರದಿಂದ ಶುರುವಾಗುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಶ್ವದ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಡೆನ್ಮಾರ್ಕ್ ಓಪನ್‍ನಲ್ಲಿ ರನ್ನರ್‍ಅಪ್
ಎನಿಸಿಕೊಂಡ ಪಿ.ವಿ. ಸಿಂಧು ಪ್ರಶಸ್ತಿ ಜಯಿಸುವ ಪಣ ತೊಟ್ಟಿದ್ದಾರೆ.

ಭಾನುವಾರವಷ್ಟೇ ಮುಕ್ತಾಯ ಕಂಡ ಡೆನ್ಮಾರ್ಕ್ ಓಪನ್ ಫೈನಲ್‍ನಲ್ಲಿ ಮುಗ್ಗರಿಸಿದ ಎರಡು ಬಾರಿಯ ವಿಶ್ವ ಬ್ಯಾಡ್ಮಿಂಟನ್ ಕಂಚು ಪದಕ ವಿಜೇತೆ ಸಿಂಧು, ರನ್ನರ್‍ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಏತನ್ಮಧ್ಯೆ ಎರಡನೇ ಸುತ್ತಿನಲ್ಲಿಯೇ ಡೆನ್ಮಾರ್ಕ್ ಓಪನ್‍ನಲ್ಲಿನ ಹೋರಾಟವನ್ನು ಕೊನೆಗಾಣಿಸಿದ ಸೈನಾ ಕೂಡ ಫ್ರೆಂಚ್ ಓಪನ್ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಇತ್ತ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಐದನೇ ಶ್ರೇಯಾಂಕಿತ ಕೆ. ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಚೀನಾದ ಟಿಯಾನ್ ಹೌವೆ ವಿರುದ್ಧ ಸೆಣಸಲಿದ್ದರೆ, ಎಚ್.ಎಸ್. ಪ್ರಣಯ್ ಚೀನಾದ ಲಿನ್ ಡಾನ್ ಸವಾಲನ್ನು ಎದುರಿಸಲಿದ್ದಾರೆ.ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ-ಅಶ್ವಿನಿ ಕಣಕ್ಕಿಳಿಯಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!