ಗುವಾಹಟಿ: ಸಾಕಷ್ಟು ತಿಂಗಳಿನಿಂದ ಮುಂದೂಡಲ್ಪಟ್ಟಿರುವ ದಕ್ಷಿಣ ಏಷ್ಯಾ ಕ್ರೀಡಾಕೂಟಕ್ಕೆ ಕೊನೆಗೂ ಸಮಯ ನಿಗದಿಯಾಗಿದೆ. ಈ ಕ್ರೀಡಾಕೂಟವನ್ನು ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ರಾಜೀವ್ ಮೆಹ್ತಾ ಮತ್ತು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಮುಂದಿನ ಫೆಬ್ರವರಿಯಲ್ಲಿ ಕ್ರೀಡಾಕೂಟ ಆಯೋಜನೆಗೆ ಒಮ್ಮತವಾಗಿ ನಿರ್ಧರಿಸಿದ್ದಾರೆ.
ಮಂಗಳವಾರ ನಾನು ಅಸ್ಸಾಂ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ, ಫೆಬ್ರವರಿಯ ಲ್ಲಿ ಕ್ರೀಡಾಕೂಟ ಆಯೋಜನೆಗೆ ನಿರ್ಧರಿಸಿದ್ದೇವೆ. ಕ್ರೀಡಾಕೂಟವನ್ನು ಇನ್ನು ಮುಂದೂಡುವು ದಿಲ್ಲ. ಕ್ರೀಡಾಕೂಟದ ಅಂತಿಮ ದಿನಾಂಕ ಶೀಘ್ರ ಪ್ರಕಟಿಸ ಲಾಗುವುದು ಎಂದು ಮೆಹ್ತಾ ತಿಳಿಸಿದ್ದಾರೆ.