ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ತೊರೆದು ಮತ್ತೊಂದು ಫ್ರಾಂಚೈಸಿ ಸೇರಲು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂದಿನ ಐಪಿಎಸ್ ಸೀಸನ್ ನಲ್ಲಿ ಟೀಂ ಚೇಂಜ್ ಮಾಡಲಿದ್ದು, ಹೊಸ ಟೀಂನತ್ತ ಧೋನಿ ತೆರಳುವ ನಿರ್ಧಾರ ಮಾಡಿದ್ದಾರಂತೆ. ನಿನ್ನೆ ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಅವರನ್ನು ಧೋನಿ ಭೇಟಿ ಮಾಡಿದ್ದ ವೇಳೆ ಸಿಎಸ್ ಕೆ ತೊರೆಯುವ ಬಗ್ಗೆ ಮಾತುಕತೆ ನಡೆಸಿರುವ ಸಾಧ್ಯತೆಗಳು ಕಂಡುಬಂದಿದ್ದು, ಇದಕ್ಕೆ ಸಿಎಸ್ ಕೆ ತಂಡದಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ ಎಂದು ತಿಳಿದು ಬಂದಿದೆ.
ಬೆಟ್ಟಿಂಗ್ ಹಗರಣ ಸಂಬಂಧ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 2ವರ್ಷ ನಿಷೇಧ ಹೇರಲಾಗಿದೆ. ನಿಷೇಧ ಹಿನ್ನೆಲೆಯಲ್ಲಿ ಸಿಎಸ್ ಕೆ ತೊರೆಯಲು ನಿರ್ಧರಿಸಿದ್ದಾರೆ. 2008ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಸಿಎಸ್ ಕೆ ತಂಡವನ್ನು 7.5 ಕೋಟಿ ನೀಡಿ ಧೋನಿ ಖರೀದಿಸಿದ್ದರು.