ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಸಾಕೇತ್ ಮೈನೇನಿ ಏರ್‍ಏಷ್ಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಹೋರಾಟವನ್ನು ಏಕಾಂಗಿಯಾಗಿ ಮುನ್ನಡೆಸಿದ್ದಾರೆ.
ಶುಕ್ರವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಕೋಟ್ರ್ ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸಾಕೇತ್ ತಮ್ಮ ಪ್ರತಿಸ್ಪರ್ಧಿ ಬೆಲ್ಜಿಯಂನ ಯಾನಿಕ್ ಮರ್ಟೆನ್ಸ್ ವಿರುದ್ಧ 6-3, 7-6(7-6) ಸೆಟ್‍ಗಳ ಅಂತರದಲ್ಲಿ ಜಯ ಸಂಪಾದಿಸಿದರು.
ಆ ಮೂಲಕ ಟೂರ್ನಿಯಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಸನಮ್ ಸಿಂಗ್, ತಮ್ಮ ಎದುರಾಳಿ ಬ್ರಿಟನ್‍ನ ಜೇಮ್್ಸ ವಾರ್ಡ್ ವಿರುದ್ಧ 3-6, 2-6 ಸೆಟ್‍ಗಳಿಂದ ಪರಾಭವಗೊಂಡರು. ಮುಂದಿನ ಸುತ್ತಿನಲ್ಲಿ ಅಗ್ರಶ್ರೇಯಾಂಕಿತ ಆಟಗಾರ ಆ್ಯಡ್ರಿಯನ್ ಮೆನೆಂಡೆಸ್ ವಿರುದ್ಧ ಸಾಕೇತ್ ಸೆಣಸಲಿದ್ದಾರೆ.
ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಅಮೆರಿಕ ಜಾನ್ ಪಾಲ್ ಫ್ರುಟೆರೊ ಮತ್ತು ಭಾರತದ ವಿಜಯ್ ಸುಂದರ್ ಪ್ರಶಾಂತ್ ಫೈನಲ್ ತಲುಪಿದರು.