ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಮತ್ತು ವಿಶ್ವ ವಿಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ 
ಕ್ರೀಡೆ

ಒಲಂಪಿಕ್ಸ್ ನಲ್ಲಿ ಟಿ-೨೦ಗಾಗಿ ಬ್ಯಾಟ್ ಮಾಡಿದ ಸಚಿನ್, ವಾರ್ನ್

ಒಲಂಪಿಕ್ಸ್ ಕ್ರೀಡೆಗಳಲ್ಲಿ ಟಿ-೨೦ ಕ್ರಿಕೆಟ್ ಸೇರಿಸಬೇಕೆಂದು ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಮತ್ತು ವಿಶ್ವ ವಿಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಕರೆ ಕೊಟ್ಟಿದ್ದಾರೆ.

ಲಂಡನ್: ಒಲಂಪಿಕ್ಸ್ ಕ್ರೀಡೆಗಳಲ್ಲಿ ಟಿ-೨೦ ಕ್ರಿಕೆಟ್ ಸೇರಿಸಬೇಕೆಂದು ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಮತ್ತು ವಿಶ್ವ ವಿಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಕರೆ ಕೊಟ್ಟಿದ್ದಾರೆ.

೧೯೯೦ರಿಂದ ಒಲಂಪಿಕ್ಸ್ ನಲ್ಲಿ ಕ್ರಿಕೆಟ್ ಆಟ ಒಳಗೊಂಡಿಲ್ಲ. ಆದರೆ ಮುಂದಿನ ತಿಂಗಳು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಲಿ, ಅಂತರಾಷ್ಟ್ರೀಯ ಒಲಂಪಿಕ್ ಸಂಸ್ಥೆಯ ಜೊತೆ ಮಾತುಕತೆ ನಡೆಸಿ ಈ ನಿಟ್ಟಿನಲ್ಲಿ ಒತ್ತಡ ಹೇರಲಿದೆ ಎಂದು ತಿಳಿದುಬಂದಿದೆ.

"ಒಲಂಪಿಕ್ ಕ್ರೀಡೆಗಳಲ್ಲಿ ಕ್ರಿಕೆಟ್ ನೋಡಲು ನಾನು ಬಯಸುತ್ತೇನೆ, ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗಬಹುದು" ಎಮು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಸೋಮವಾರ ಬಿಬಿಸಿ ವಾಹಿಸಿಗೆ ತಿಳಿಸಿದ್ದಾರೆ.

ಇದಕ್ಕೆ ಧ್ವನಿಗೂಡಿಸಿರುವ ಸಚಿನ್ ತೆಂಡುಲ್ಕರ್ "ಇದು ಅದ್ಭುತ ಐಡಿಯಾ, ಟಿ ೨೦ ಇದಕ್ಕೆ ಸರಿಹೊಂದುತ್ತದೆ" ಎಂದಿದ್ದಾರೆ.

ನವೆಂಬರ್ ನಲ್ಲಿ ಅಮೆರಿಕಾದಲ್ಲಿ ನಡೆಯಲಿರುವ ಟ್ವೆಂಟಿ೨೦ ಆಲ್ ಸ್ಟಾರ್ ಕ್ರಿಕೆಟ್ ಸರಣಿಯ ಎರಡು ತಂಡಗಳ ನಾಯಕತ್ವವನ್ನು ಸಚಿನ್ ಮತ್ತು ವಾರ್ನ್ ವಹಿಸಿಕೊಂಡಿದ್ದಾರೆ. ಕ್ರಿಕೆಟ್ ಅನ್ನು ಜಾಗತಿಕವಾಗಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಸರಣಿ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್

ಕಾಕ್‌ಪಿಟ್ ದಾಳಿ ಬಳಿಕ 150ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನವನ್ನು ಹೊಡೆದುರುಳಿಸಲು ಇಸ್ರೇಲ್ ಸಿದ್ಧವಾಗಿತ್ತು: ವರದಿ

ಸೌದಿ ಮಿಲಿಟರಿ ಕಾರ್ಯಾಚರಣೆಗೆ ಹೌತಿ ಬಂಡುಕೋರರ ತಿರುಗೇಟು: ರಿಯಾದ್ ವಿಮಾನ ನಿಲ್ದಾಣ, ಅರಾಮ್ಕೊ ಸಂಸ್ಕರಣಾಗಾರ ಗುರಿಯಾಗಿಸಿಕೊಂಡು ದಾಳಿ!

ರಾಜ್ಯದಲ್ಲಿ ಮಳೆ ಮತ್ತೆ ಚುರುಕು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಸಾಧ್ಯತೆ..!