ಐಬಿಎಲ್ ಸಾಂದರ್ಭಿಕ ಚಿತ್ರ 
ಕ್ರೀಡೆ

ಐಬಿಎಲ್ 2ನೇ ಆವೃತ್ತಿಗೆ ಅದ್ಧೂರಿ ಉದ್ಘಾಟನೆ

ಚೊಚ್ಚಲ ಟೂರ್ನಿಯ ನಂತರ ಎರಡು ವರ್ಷಗಳ ಅವಧಿ ನಂತರ ಮತ್ತೆ ಅಭಿಮಾನಿಗಳನ್ನು ರಂಜಿಸಲು ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಸಂಪೂರ್ಣವಾಗಿ ಸಜ್ಜಾಗಿ ...

ಮುಂಬಯಿ: ಚೊಚ್ಚಲ ಟೂರ್ನಿಯ ನಂತರ ಎರಡು ವರ್ಷಗಳ ಅವಧಿ ನಂತರ ಮತ್ತೆ ಅಭಿಮಾನಿಗಳನ್ನು ರಂಜಿಸಲು ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಸಂಪೂರ್ಣವಾಗಿ ಸಜ್ಜಾಗಿ ನಿಂತಿದೆ.

ಎರಡು ವರ್ಷಗಳ ಬಳಿಕ ಭಾರತೀಯ ಬ್ಯಾಡ್ಮಿಂಟನ್‌ ಲೀಗ್‌ (ಐಬಿಎಲ್‌) ಪುನರಾರಂಭಗೊಳ್ಳುತ್ತಿದೆ ಎಂದು ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ (ಬಿಎಐ)ನ ಅಧ್ಯಕ್ಷ ಅಖೀಲೇಶ್‌ ದಾಸ್‌ ಗುಪ್ತ ತಿಳಿಸಿದ್ದಾರೆ.

15 ದಿನಗಳ ಕಾಲ ನಡೆಯಲಿರುವ ಐಬಿಎಲ್‌ ಒಂದು ಮಿಲಿಯ ಡಾಲರ್‌ ಬಹುಮಾನ ನಿಧಿಯನ್ನು ಒಳಗೊಂಡಿದೆ. ಮುಂದಿನ ವರ್ಷದ ಜನವರಿ 2ರಿಂದ 17ರವರಗೆ ನಡೆಯಲಿರುವ ಈ ಕೂಟದಲ್ಲಿ ಆರು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.

ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಗುಪ್ತ ಅವರು ಐಬಿಎಲ್‌ ಮರಳಿರುವ ವಿಷಯವನ್ನು ಪ್ರಕಟಿಸಿದರು. ಈ ಸಂದರ್ಭ ಖ್ಯಾತ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌, ಕೆ. ಶ್ರೀಕಾಂತ್‌, ಪಿ.ವಿ. ಸಿಂಧು, ಕೋಚ್‌ ಗೋಪಿಚಂದ್‌ ಉಪಸ್ಥಿತರಿದ್ದರು. ಉದ್ಘಾಟನಾ ವರ್ಷದ ಐಬಿಎಲ್‌ಗಿಂತ ಬೃಹತ್‌ ಮಟ್ಟದಲ್ಲಿ ಈ ಕೂಟ ನಡೆಯುವ ಬಗ್ಗೆ ಗುಪ್ತ ಭರವಸೆ ವ್ಯಕ್ತಪಡಿಸಿದರು.

ಇಂದು ನನ್ನ ಪಾಲಿಗೆ ಹೆಮ್ಮೆಯ ದಿನವಾಗಿದೆ. ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌ನ ಎರಡನೇ ಆವೃತ್ತಿ ನಡೆಯುವ ದಿನವನ್ನು ಪ್ರಕಟಿಸಲು ಖುಶಿಯಾಗುತ್ತಿದೆ. ಈ ಕೂಟದ ಮೊದಲ ಕೂಟಕ್ಕಿಂತ ಭರ್ಜರಿಯಾಗಿ ಸಾಗುವ ವಿಶ್ವಾಸ ನನಗಿದೆ ಎಂದುಹೇಳಿದ ಗುಪ್ತ  ತಳಮಟ್ಟದಲ್ಲಿರುವ ಯುವ ಪ್ರತಿಭೆಗಳನ್ನು ಪ್ರಚಯಿಸುವುದು ಇದರ ಉದ್ದೇಶ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT