ಡಿಸೆಂಬರ್ 13 ರಂದು ಸಪ್ತಪದಿ ತುಳಿಯಲಿದ್ದಾರೆ ಕ್ರಿಕೆಟಿಗ ರೋಹಿತ್ ಶರ್ಮಾ
ಟೀಂ ಇಂಡಿಯಾ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಡಿಸೆಂಬರ್ 13 ರಂದು ತಮ್ಮ ಗೆಳತಿ ರಿತಿಕಾ ಜೊತೆ ವಿವಾಹ ಬಂಧನಕ್ಕೊಳಗಾಗಲಿದ್ದಾರೆ. ...
ಮುಂಬಯಿ; ಟೀಂ ಇಂಡಿಯಾ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಡಿಸೆಂಬರ್ 13 ರಂದು ತಮ್ಮ ಗೆಳತಿ ರಿತಿಕಾ ಜೊತೆ ವಿವಾಹ ಬಂಧನಕ್ಕೊಳಗಾಗಲಿದ್ದಾರೆ.
ಡಿಸೆಂಬರ್ 13 ರಂದು ವಿವಾಹಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದ್ದು, ಈ ವೇಳೆ ಭಾರತ ತಂಡ ಯಾವುದೇ ಪಂದ್ಯಗಳನ್ನಾಡುತ್ತಿಲ್ಲ ಎಂದು ರೋಹಿತ್ ಶರ್ಮಾ ಅವರ ಆಪ್ತ ಮೂಲಗಳು ತಿಳಿಸಿವೆ.
ಸ್ಪೋರ್ಟ್ಸ್ ಇವೆಂಟ್ ಮ್ಯಾನೇಜರ್ ಆಗಿರುವ ರಿತಿಕಾ ಕಳೆದ 6 ವರ್ಷಗಳ ಹಿಂದೆಯೇ ರೋಹಿತ್ ಗೆ ಪರಿಚಯವಾಗಿದ್ದರು. ಮದುವೆ ಬಾಂದ್ರಾದ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ.
ಸುರೇಶ್ ರೈನಾ , ಹರ್ಭಜನ್ ಸಿಂಗ್ ಬಳಿಕ ರೋಹಿತ್ ಶರ್ಮಾ ಅವರು ಡಿಸೆಂಬರ್ 13 ರಂದು ಪ್ರೇಯಸಿ ರಿತಿಕಾ ಅವರನ್ನು ವಿವಾಹವಾಗಲಿದ್ದಾರೆ .