ಕರ್ನಾಟಕ ತಂಡದ ಉತ್ತಪ್ಪ, ವಿನಯ್, ಬೌಲಿಂಗ್ ಕೋಚ್ ಅರುಣ್ ಕುಮಾರ್ ಸಮಾಲೋಚನೆ 
ಕ್ರೀಡೆ

ರಣಜಿ ಟೂರ್ನಿ ಪ್ರಮುಖರ ಅಲಭ್ಯತೆಯಲ್ಲಿ ರಾಜಸ್ತಾನ ವಿರುದ್ಧ ಹಾಲಿ ಚ್ಯಾಂಪಿಯನ್ನರ ಕಾದಾಟ

ಪ್ರಸಕ್ತ ರಣಜಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಟೂರ್ನಿ ಆರಂಭಿಸಿದರೂ ಇವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸದೇ ಉಳಿದಿರುವ ...

ಜೈಪುರ: ಪ್ರಸಕ್ತ ರಣಜಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಟೂರ್ನಿ ಆರಂಭಿಸಿದರೂ ಇವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸದೇ ಉಳಿದಿರುವ ಹಾಲಿ ಚ್ಯಾಂಪಿಯನ್ ಕರ್ನಾಟಕ ಈಗ ರಾಜಸ್ತಾನ ವಿರುದ್ಧ ಸೆಣೆಸಲು ತತಯಾರಿ ನಡೆಸಿದೆ.

ಪ್ರಸಕ್ತ ರಣಜಿ ಋತುವಿನಲ್ಲಿ ಗೆಲುವಿನ ಮುಖವನ್ನೇ ಕಾಣದೆ ಅರ್ಧ ಹಾದಿ ಕ್ರಮಿಸಿರುವ ಕರ್ನಾಟಕ, "ಎ' ವಿಭಾಗದ 5ನೇ ಲೀಗ್‌ ಪಂದ್ಯದಲ್ಲಿ ರಾಜಸ್ಥಾನವನ್ನು ಎದುರಿಸಲಿದೆ. ಶುಕ್ರವಾರದಿಂದ ಆರಂಭವಾಗಲಿರುವ ಈ ಪಂದ್ಯಕ್ಕೆ ಸಾಕ್ಷಿಯಾಗಲಿರುವುದು ಜೈಪುರದ "ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ'.

ಸತತ ಎರಡು ಬಾರಿ ರಣಜಿ ಟ್ರೋಫಿ ಗೆದ್ದಿರುವ ಕರ್ನಾಟಕಕ್ಕೆ ಹ್ಯಾಟ್ರಿಕ್‌ ಕನಸೇನೋ ಇದೆ. ಆದರೆ ಈವರೆಗೆ ಚಾಂಪಿಯನ್ನರ ಆಟವನ್ನು ಆಡಿಲ್ಲ. ಗೆಲುವು ಹತ್ತಿರಕ್ಕೆ ಸುಳಿದಿಲ್ಲ. ನಾಲ್ಕನ್ನೂ ಡ್ರಾ ಮಾಡಿಕೊಂಡಿದೆ. ಒಂದರಲ್ಲಿ ಇನ್ನಿಂಗ್ಸ್‌ ಹಿನ್ನಡೆ ಕಂಡಿದೆ. ಗೆಲ್ಲುವಂಥ ಎರಡು ಅವಕಾಶಗಳನ್ನು ಕೈಚೆಲ್ಲಿದೆ. ನಾಕೌಟ್‌ ಹಾದಿ ದುರ್ಗಮ ಗೊಂಡಿದೆ. ಹೀಗಾಗಿ ಉಳಿದ ನಾಲ್ಕೂ ಪಂದ್ಯಗಳನ್ನು ಗೆಲ್ಲಬೇಕಿದೆ, ಇನ್ನಿತರ ತಂಡಗಳ ಫ‌ಲಿ ತಾಂಶವನ್ನೂ ಅವಲಂಬಿಸಬೇಕಿದೆ. ಆಗಷ್ಟೇ ಮುಂದಿನ ಹಂತದ ಹಾದಿ ತೆರೆದುಕೊಳ್ಳಲಿದೆ. ಇದು ವಿನಯ್‌ ಪಡೆಯ ಮುಂದಿರುವ ಕಠಿಣ ಸವಾಲು.

ಇನ್ನಿಂಗ್ಸ್‌ ಹಿನ್ನಡೆಯೊಂದಿಗೆ ಆರಂಭ
ಕರ್ನಾಟಕ ಪ್ರಸಕ್ತ ಸಾಲಿನ ರಣಜಿ ಋತುವನ್ನು ಆರಂಭಿಸಿದ್ದೇ ಇನ್ನಿಂಗ್ಸ್‌ ಹಿನ್ನಡೆಯೊಂದಿಗೆ, ಅದೂ ಅಸ್ಸಾಂನಂಥ ಸಾಮಾನ್ಯ ತಂಡದ ಎದುರು. ಬಳಿಕ ಬಂಗಾಲ ತಂಡವನ್ನು ಎದುರಿಸಿದ ವಿನಯ್‌ ಪಡೆ ಅಲ್ಲಿಯೂ ಡ್ರಾ ಸಾಧಿಸಿತು. ಆದರೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ  ಶಿಶಿರ್‌ ಭವಾನೆ, ಕರುಣ್‌ ನಾಯರ್‌, ಶ್ರೇಯಸ್‌ ಗೋಪಾಲ್‌ ಶತಕ ಸಿಡಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. 3ನೇ ಪಂದ್ಯದಲ್ಲಿ ಕರ್ನಾಟಕ ಬೆಂಗಳೂರಿನಲ್ಲಿ ವಿದರ್ಭವನ್ನು ಎದುರಿಸಿತು. ಈ ಪಂದ್ಯದಲ್ಲಿ ಗೆಲ್ಲುವ ಕನಸು ಸಾಕಾರಗೊಳ್ಳಲಿಲ್ಲ. ಇನ್ನಿಂಗ್ಸ್‌ ಮುನ್ನಡೆಗಷ್ಟೇ ಸಮಾಧಾನಪಟ್ಟಿತು.

ಹರಿಯಾಣ ವಿರುದ್ಧ ಮೈಸೂರಿನಲ್ಲಿ ನಡೆದ 4ನೇ ಪಂದ್ಯದಲ್ಲಿ ಕರ್ನಾಟಕದ ದರ್ಬಾರ್‌ ನಡೆಯಲಿಲ್ಲ. ವೀರೇಂದ್ರ ಸೆಹವಾಗ್‌ ಅಬ್ಬರದ ಆಟ ವಿನಯ್‌ ಪಡೆಗೆ ಮುಳುವಾಯಿತು. ಇಲ್ಲಿ ಕರ್ನಾಟಕ ಸೋಲಿನಿಂದ ಪಾರಾದದ್ದೇ ಒಂದು ಪವಾಡ!

ಅಗ್ರ ಆಟಗಾರರ ಅನುಪಸ್ಥಿತಿ
ದಕ್ಷಿಣ ಆಫ್ರಿಕಾ ವಿರುದ್ಧ ಅಭ್ಯಾಸ ಪಂದ್ಯ ಆಡ ಲಿರುವುದರಿಂದ ಕೆ.ಎಲ್‌. ರಾಹುಲ್‌, ಕರುಣ್‌ ನಾಯರ್‌ ಸೇವೆ ಈ ಸಲ ಕರ್ನಾಟಕಕ್ಕೆ ಲಭಿಸುತ್ತಿಲ್ಲ. ಅಭಿಮನ್ಯು ಮಿಥುನ್‌, ಮನೀಶ್‌ ಪಾಂಡೆ ಗಾಯಾ ಳಾಗಿದ್ದಾರೆ. ಜ್ವರದಿಂದ ಬಳಲುತ್ತಿರುವ ವೇಗಿ ಶರತ್‌ ಕೂಡ ತಂಡವನ್ನು ಪ್ರತಿನಿಧಿಸುತ್ತಿಲ್ಲ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ  ಪ್ರಸಿದ್ಧ್ ಕೃಷ್ಣ, ಡಿ. ನಿಶ್ಚಲ್‌, ಮೀರ್‌ ಕೌನಿಯಾನ್‌ ಅಬ್ಟಾಸ್‌ ಅವಕಾಶ ಪಡೆದಿದ್ದಾರೆ. ಸ್ಟುವರ್ಟ್‌ ಬಿನ್ನಿ ಮತ್ತೆ ತಂಡಕ್ಕೆ ಮರಳಿರುವುದು ರಾಜ್ಯ ತಂಡಕ್ಕೆ ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ. ಅಗ್ರ ಆಟಗಾರರ ಅನುಪಸ್ಥಿತಿ ಗೌತಮ್‌, ಸಮರ್ಥ್, ರಾಬಿನ್‌ ಉತ್ತಪ್ಪ ಮೇಲೆ ಹೆಚ್ಚಿನ ಒತ್ತಡ ತಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!