ಕ್ರೀಡೆ

ಇಂದಿನಿಂದ ಎರಡು ದಿನಗಳ ಅಭ್ಯಾಸ ಪಂದ್ಯ, ರಾಜ್ಯದ ಕರಣ್ ಮತ್ತು ರಾಹುಲ್ ಕಣಕ್ಕೆ

Shilpa D

ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಜೊತೆಗೆ ಭಾರತ ತಂಡದ ಅಧ್ಯಕ್ಷರ ಇಲೆವೆನ್ ತಂಡದ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.

ಶುಕ್ರವಾರದಿಂದ ಬಾರ್ಬನ್ ಕ್ರೀಡಾಂಗಣದಲ್ಲಿ ನಡೆಯುವ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಕ್ರಿಕೆಟ್‍ಗೆ ಇಲ್ಲಿನ ಪಿಚ್ ವಾತಾವರಣಕ್ಕೆ ಹೊಂದಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಲಿದೆ. ಕೇವಲ ದಕ್ಷಿಣ ಆಫ್ರಿಕಾ ಮಾತ್ರವಲ್ಲದೆ, ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಅಧ್ಯಕ್ಷರ  ಇಲೆವೆನ್ ನಾಯಕ ಚೇತೇಶ್ವರ ಪೂಜಾರ ಸೇರಿದಂತೆ ಕೆ.ಎಲ್.ರಾಹುಲ್‍ಗೆ ಹರಿಣಗಳ ಬೌಲಿಂಗ್ ದಾಳಿಯ ಅನುಭವ ಪಡೆಯಲು ಉತ್ತಮ ಅವಕಾಶವಾಗಿದೆ. ಈ ಇಬ್ಬರೂ ಆಟಗಾರರು ಟಿ20 ಹಾಗೂ ಏಕದಿನ  ಆಡಿರದ ಹಿನ್ನೆಲೆಯಲ್ಲಿ ಈ ಪಂದ್ಯ ಸರಣಿಯಲ್ಲಿ ಎದುರಾಳಿ ತಂಡದ ಸಾಮರ್ಥ್ಯವನ್ನು ಅರಿಯಲು ನೆರವಾಗಲಿದೆ.

ಉಳಿದಂತೆ ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಗಮನ ಸೆಳೆದು ರಾಷ್ಟ್ರೀಯ ತಂಡದಲ್ಲಿನ ಅವಕಾಶದ ಕನಸು  ಕಾಣುತ್ತಿರುವ ಕರುಣ್ ನಾಯರ್,ಶ್ರೇಯಸ್ ಅಯ್ಯರ್, ಉನ್ಮುಕ್ತ್ ಚಂದ್, ಕುಲ್ದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್‍ಗೆ ತಮ್ಮ ಪ್ರತಿಭೆ ಅನಾವರಣ ಮಾಡಲು ಉತ್ತಮ ವೇದಿಕೆ ಕಲ್ಪಿಸಿದಂತಾಗಿದೆ.ಟೆಸ್ಟ್ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೆ ವೃದ್ಧಿಮಾನ್  ಸಾಹ ಜೊತೆಗೆ ಪೈಪೋಟಿ ನಡೆಸುತ್ತಿರುವ ನಮನ್  ಓಜಾಗೂ ಇದು ಉತ್ತಮ ಅವಕಾಶವಾಗಿದೆ.ಈ ಯುವ ಆಟಗಾರರು ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರಬಲ ತಂಡದ ವಿರುದ್ದ ಮುಂದುವರಿಸಿದರೇ, ಆಯ್ಯೆಗಾರರ ಒಲವು ಸಂಪಾದಿಸಲು ಸುಲಭವಾಗಿದೆ. ಟೀಂ ಇಂಡಿಯಾದಲ್ಲಿ ಸ್ಪಿನ್ ವಿಬಾಗದಲ್ಲಿ ಸಾಕಷ್ಟು ಪೈಪೋಟಿ ಇದ್ದರೂ ಯುವ ಪ್ರತಿಭೆಗಳಾದ  ಕರ್ಣ್ ಶರ್ಮಾ, ಆಲ್ ರೌಂಡರ್ ಪರ್ವೇಜ್ ರಸೂಲ್, ಜಯಂತ್ ಯಾದವ್ ತಮ್ಮ ಪ್ರಯತ್ನ ಹಾಕಲು ಎದುರು ನೋಡುತ್ತಿದ್ದಾರೆ.

SCROLL FOR NEXT