ಅರ್ಷದ್ ಖಾನ್ 
ಕ್ರೀಡೆ

ಮಾಜಿ ಪಾಕ್ ಆಟಗಾರ ಈಗ ಚಾಲಕ

ಪಾಕಿಸ್ತಾನದ ಮಾಜಿ ಬೌಲರ್ ಅರ್ಷದ್ ಖಾನ್ ಈಗ ಸಿಡ್ನಿಯಲ್ಲಿ ಉಬೆರ್ ಟ್ಯಾಕ್ಸಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ಫೇಸ್‍ಬುಕ್‍ನಲ್ಲಿ ಗಣೇಶ್...

ನವದೆಹಲಿ: ಪಾಕಿಸ್ತಾನದ ಮಾಜಿ ಬೌಲರ್ ಅರ್ಷದ್ ಖಾನ್ ಈಗ ಸಿಡ್ನಿಯಲ್ಲಿ ಉಬೆರ್ ಟ್ಯಾಕ್ಸಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ಫೇಸ್‍ಬುಕ್‍ನಲ್ಲಿ ಗಣೇಶ್
ಬಿರ್ಲೆ ಎಂಬಾತ ಈ ವಿಷಯವನ್ನು ಪೋಸ್ಟ್ ಮಾಡಿದ್ದರಿಂದ ವಿಷಯ ಬೆಳಕಿಗೆ ಬಂದಿದೆ.

ನಾನು ತೆರಳುತ್ತಿದ್ದ ಕಾರಿನ ಚಾಲಕನ ಜತೆ ಮಾತನಾಡಿದೆ. ತಾನು ಪಾಕಿಸ್ತಾನಿಯಾಗಿದ್ದು ಸಿಡ್ನಿಯಲ್ಲಿ ನೆಲೆಸಿರುವುದಾಗಿ ತಿಳಿಸಿದ. ಐಸಿಎಲ್‍ನಲ್ಲಿ ಲಾಹೋರ್ ಬಾದ್ಶಾಸ್ ಪರ ಆಡುವಾಗ ಸಾಕಷ್ಟು ಬಾರಿ ಹೈದರಾಬಾದ್‍ಗೆ ತೆರಳಿದ್ದಾಗಿ ತಿಳಿಸಿದ. ಆನಂತರ ಪೂರ್ಣ ಹೆಸರು ಕೇಳಿದಾಗ ನನಗೆ ಅಚ್ಚರಿಯಾಯಿತು. ಬಳಿಕವಷ್ಟೇ ಆತನ ಮುಖವನ್ನು ಪತ್ತೆ ಹಚ್ಚಿದೆ'' ಎಂದು ಪೋಸ್ಟ್ ಮಾಡಲಾಗಿತ್ತು.

ಅರ್ಷದ್ ಖಾನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಭಾರತ ವಿರುದ್ಧ ಬೆಂಗಳೂರಿನಲ್ಲಿ ಆಡಿದ್ದರು. ಏಕದಿನ ಪಂದ್ಯವನ್ನು ರಾವಲ್ಪಿಂಡಿಯಲ್ಲಿ ಆಡಿದ್ದರು. 1997-98ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಅರ್ಷದ್, 9 ಟೆಸ್ಟ್ ಪಂದ್ಯಗಳಿಂದ 36, 58 ಏಕದಿನ ಪಂದ್ಯಗಳಿಂದ 56 ವಿಕೆಟ್ ಪಡೆದಿದ್ದರು. ಇವರು ವಿವಾದಿತ ಐಎಸ್‍ಎಲ್ ಟೂರ್ನಿಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ದೂರ ಉಳಿಯಬೇಕಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!