ಮುಂಬೈ: ಬದುಕಲ್ಲಿ ಖುಷಿ ಖುಷಿಯಾಗಿರಲು ಮಹೇಂದ್ರ ಸಿಂಗ್ ಧೋನಿಯ ಪ್ರೇರಣೆಯೇ ಕಾರಣ ಎಂದು ಕ್ರಿಕೆಟಿಗ ಸುರೇಶ್ ರೈನಾ ಹೇಳಿದ್ದಾರೆ.
2011ರ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಮೇಲೆ ಹೇಗೆ ಪ್ರಭಾವ ಬೀರಿದ್ದಾರೆ ಎಂಬುದನ್ನು ರೈನಾ ಟಾಕ್ ಶೋವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.
ಬಾಲಿವುಡ್ ನಟ ಅನುಪಮ್ ಖೇರ್ ನಿರೂಪಣೆಯ "ದ ಅನುಪಮ್ ಖೇರ್ ಶೋ -ಕುಚ್ ಭಿ ಹೋ ಸಕ್ತಾ ಹೈ" ಟಾಕ್ ಶೋ ನಲ್ಲಿ ಸುರೇಶ್ ರೈನಾ ಅತಿಥಿಯಾಗಿ ಆಗಮಿಸಲಿದ್ದಾರೆ. ಈ ಶೋ ನಲ್ಲಿ ಅತಿಥಿಯಾಗಿ ಆಗಮಿಸಲಿರುವ ಮೊದಲ ಕ್ರೀಡಾಪಟುವಾಗಿದ್ದಾರೆ ರೈನಾ.
ಬದುಕಲ್ಲಿ ಖುಷಿಯಾಗಿರುವುದು ಹೇಗೆ ಎಂಬುದನ್ನು ಧೋನಿ ನನಗೆ ಕಲಿಸಿಕೊಟ್ಟಿದ್ದಾರೆ. ವಿಶ್ವಕಪ್ ನಡೆಯುತ್ತಿದ್ದ ವೇಳೆ ಧೋನಿಗೆ ಮಗಳು ಹುಟ್ಟಿದ್ದು. ಆಗ ನಾನು ನೀವು ಈಗ ಮನೆಗೆ ಹೋಗುವುದಿಲ್ಲವೇ? ಎಂದು ಕೇಳಿದ್ದೆ. ಅದಕ್ಕೆ ಅವರು, ನನಗೆ ದೇಶ ಮೊದಲು, ಆಮೇಲೆ ಕುಟುಂಬ ಎಂದು ಉತ್ತರಿಸಿದ್ದರು.
ಅದೆಷ್ಟೇ ಒತ್ತಡವಿದ್ದರೂ ಧೋನಿ ಜತೆ ಮಾತಾಡಿದರೆ ಸಮಾಧಾನವಾಗುತ್ತದೆ. ಅವರ ಸ್ವಭಾವವೇ ಅಂಥದ್ದು, ಅವರೊಬ್ಬ ಪ್ರೇರಣಾ ಶಕ್ತಿ. ಅವರಿದ್ದರೆ ಬೇರೆ ಯಾವ ರೀತಿಯ ಸ್ಫೂರ್ತಿಯೂ ಬೇಡವೆನಿಸುತ್ತದೆ ಎಂದು ರೈನಾ ಹೇಳಿದ್ದಾರೆ.