ಕ್ರಿಕೆಟ್ ಪಂದ್ಯವಾಡುವಾಗ ಮೈದಾನದಲ್ಲೇ ಮೃತಪಟ್ಟಿದ್ದ ಅಂಕಿತ್ ಕೇಸರಿ ಕುಟುಂಬಕ್ಕೆ ಬಿಸಿಸಿಐ ರೂ. 25 ಲಕ್ಷ ಪರಿಹಾರ ನೀಡಲಿದೆ. ಅಂಕಿತ್ ಬಂಗಾಳ ತಂಡದ ಪರ ಕೂಚ್ ಬಿಹಾರ್ ಟ್ರೋಫಿಯಲ್ಲಿ ಆಡಿದ ಕಾರಣ, ಬಿಸಿಸಿಐ ಜೀವ ವಿಮಾ ಯೋಜನೆಯ ಲಾಭ ಪಡೆದಿದ್ದಾರೆ. ಮಂಡಳಿಯ ಆಶ್ರಯದಲ್ಲಿ ಆಯೋಜನೆಯಾದ ಟೂರ್ನಿಯಲ್ಲಿ ಆಡಿದ ಆಟಗಾರರು ಈ ಯೋಜನೆಯಡಿ ಬರುತ್ತಾರೆ.
ಆಟಗಾರ ಮೈದಾನದಲ್ಲಿ ಮೃತಪಟ್ಟರೆ ರೂ. 25 ಲಕ್ಷದವರೆಗೂ ಪರಿಹಾರ ಸಿಗಲಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುಬೀರ್ ಗಂಗೂಲಿ ತಿಳಿಸಿದ್ದಾರೆ. ಬಿಸಿಸಿಐನ ಜೀವ ವಿಮಾ ಕಂಪನಿ ಈ ಮೊತ್ತವನ್ನು ಬಿಡುಗಡೆ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಸಂತ್ರಸ್ತನ ಕುಟುಂಬದ ಕೈ ಸೇರಲಿದೆ ಎಂದಿದ್ದಾರೆ.