ಕರಾಚಿ: ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿ(ಐಸಿಸಿ)ಯಲ್ಲಿ ಬಿಗ್ ಟ್ರೀ ಆಡಳಿತ ವ್ಯವಸ್ಥೆ ಜಾರಿಗೆ ತರುವ ಬಿಸಿಸಿಐನ ಮಹತ್ವಾಕಾಂಕ್ಷೆಗೆ ಬೆಂಬಲ ನೀಡದ್ದಕ್ಕೆ ಪ್ರತಿಯಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗೆ ಬಿಸಿಸಿಐ, ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಗೆ ಅಸ್ತು ಎನ್ನುವ ಮೂಲಕ ಋಣ ತೀರಬೇಕೆಂದು ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಬಿಗ್ ಟ್ರೀ ವಿಚಾರದಲ್ಲಿ ತನ್ನನ್ನು ಬೆಂಬಲಿಸಿದರೆ, ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಗೆ ಪುನಃ ಚಾಲನೆ ನೀಡುವುದಾಗಿ ಬಿಸಿಸಿಐ ಆಶ್ವಾಸನೆ ನೀಡಿತ್ತು.
ಅದರಂತೆ, ಪಿಸಿಬಿ, ಬಿಸಿಸಿಐಯನ್ನು ಬೆಂಬಲಿಸಿತ್ತು. ಇದೀಗ, ಕೊಟ್ಟ ಮಾತಿನಂತೆ ಬಿಸಿಸಿಐ, ಭಾರತ-ಪಾಕ್ ಕ್ರಿಕೆಟ್ ಸರಣಿಯನ್ನು ಪುನರಾರಂಭಿಸಬೇಕು ಎಂದು ಹೇಳಿದ್ದಾರೆ.