ಕ್ರಿಕೆಟಿಗ ಯುವರಾಜ್ ಸಿಂಗ್‍ಗೆ ಯುವರಾಣಿ ಸಿಕ್ಕಳಾ? ಬ್ರಿಟನ್ ಮೂಲದ ಬಾಲಿವುಡ್ ತಾರೆ ಹಝೆಲ್ ಕೀಚ್ ಜೊತೆ ಯುವಿ ಸಿಕ್ಕಾಪಟ್ಟೆ ಓಡಾಡ್ತಿದ್ದಾರೆಂಬ ಸುದ್ದಿ ಹಬ್ಬಿದೆ.
ಹಿಂದಿಯ ಬಾಡಿಗಾರ್ಡ್, ಮ್ಯಾಕ್ಸಿಮಮ್- ಸಿನಿಮಾಗಳಲ್ಲಿ ನಟಿಸಿರುವ ಕೀಚ್, ಸುಝುಕಿ ಕಂಪನಿಯ ಕೆಲವು ಜಾಹೀರಾತುಗಳಿಗೆ ರೂಪದರ್ಶಿ ಆದವಳು. ಕೆಲ ವರುಷಗಳಿಂದ ಮುಂಬೈನಲ್ಲೇ ನೆಲೆ ನಿಂತಿದ್ದಾಳೆ.
ಈ ಹಿಂದೆಯೂ ಯುವಿ ಹೆಸರು ಕಿಮ್ ಶರ್ಮಾ, ಗೀತಾ ಬಸ್ರಾ, ದೀಪಿಕಾ ಪಡುಕೋಣೆ ಅವರೊಂದಿಗೆ ಥಳುಕು ಹಾಕಿಕೊಂಡಿತ್ತು. ಆದರೆ, ಈ ಸಲ ಇದು ಸತ್ಯವಾಗುತ್ತಾ? ನೋಡೋಣ.