ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ವಿಷಯದ ಕುರಿತಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಮಾಜಿ ಬಾಸ್ ಎನ್ ಶ್ರೀನಿವಾಸನ್ ಅವರನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿಸಲು ಮುಂದಾಗಿದೆ.
ಐಪಿಎಲ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡದ ಮಾಲೀಕರಾಗಿರುವ ಎನ್ ಶ್ರೀನಿವಾಸನ್ ಅವರಿಗೆ ಹಳ್ಳ ತೋಡಲು ನಿರ್ಧರಿಸಿರುವ ಬಿಸಿಸಿಐ, ಭಾರತೀಯ ಕ್ರಿಕೆಟ್ ಮಂಡಳಿಯ ಅಧಿಕಾರದಿಂದ ದೂರ ಇಡುವ ಕಸರತ್ತಿಗೆ ಕೈ ಹಾಕಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಮೋಸದಾಟ ಮತ್ತು ಬೆಟ್ಟಿಂಗ್ನಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈಗಾಗಲೇ ಚೆನ್ನೆ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಅವಧಿಗೆ ನಿಷೇಧ ಹೇರಲಾಗಿದ್ದು ಅಲ್ಲದೆ ಸಿಎಸ್ಕೆಯ ಸಿಇಒ ಗುರುನಾಥ ಮೇಯಪ್ಪನ್ ಮತ್ತು ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಕ್ರಿಕೆಟ್ನ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ವಿಷೇಧ ಹೇರಲಾಗಿದೆ.
ಇದರ ಬೆನ್ನಲ್ಲೇ ಈಗ ಬಿಸಿಸಿಐ ತನ್ನ ಮಾಜಿ ಬಾಸ್ ಕ್ರಿಕೆಟ್ ಅಂಗಳಕ್ಕೆ ಕಾಲಿಡದಂತೆ ನೋಡಿಕೊಳ್ಳಲು ಮುಂದಾಗಿದೆ.