ಬಲಿಷ್ಠ ಚೀನಾ ಎದುರು ಸೋತ ಭಾರತ ವನಿತೆಯರು
ಆರಂಭಿಕ ಎರಡು ಪಂದ್ಯಗಳಲ್ಲಿ ಕೊರಿಯಾ ಹಾಗೂ ಸಿಂಗಾಪುರ ವಿರುದ್ಧ ಜಯ ಗಳಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಭಾರತೀಯ ವನಿತೆಯರ...
ಚಾಂಗ್ಜೌ: ಆರಂಭಿಕ ಎರಡು ಪಂದ್ಯಗಳಲ್ಲಿ ಕೊರಿಯಾ ಹಾಗೂ ಸಿಂಗಾಪುರ ವಿರುದ್ಧ ಜಯ ಗಳಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಭಾರತೀಯ ವನಿತೆಯರ ಪಡೆ, ಬುಧವಾರ ಇಲ್ಲಿ ನಡೆದ ಮಹಿಳೆಯರ ಕಿರಿಯರ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಪಂದ್ಯದಲ್ಲಿ ಬಲಿಷ್ಠ ಚೀನಾ ವಿರುದ್ಧ 2-4 ಗೋಲುಗಳ ಅಂತರದಲ್ಲಿ ಸೋಲು ಕಂಡಿತು. ಚೀನಾ ಪರವಾಗಿ ಮಿಂಚಿದ ಬಿಂಗ್ ಜುಂಗ್ ಜು, 2 ಗೋಲು (10, 11ನೇ ನಿಮಿಷ) ಗಳಿಸಿದರೆ, ಕ್ಯುಯು 15ನೇ ನಿಮಿಷ ಹಾಗೂ ಚೆನ್ಯಂಗ್ (50ನೇ ನಿಮಿಷ) ಗೋಲು ದಾಖಲಿಸಿದರೆ, ಭಾರತದ ಪರವಾಗಿ, ಜಸ್ಪ್ರೀತ್ ಕೌರ್ (33ನೇ ನಿಮಿಷ), ಗುರ್ಜಿತ್ ಕೌರ್ (56ನೇ ನಿಮಿಷ) ಗೋಲು ದಾಖಲಿಸಿದರು.