ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಿಮೋನಾ ಹಾಲೆಪ್‍ಗೆ ಆಘಾತ ನೀಡಿದ ಪ್ಲಾವಿಯಾ ಪೆನೆಟ್ಟಾ

ವಿಶ್ವದ ಎರಡನೇ ರ್ಯಾಂಕಿಂಗ್‍ನ ಆಟಗಾರ್ತಿ ಸಿಮೋನಾ ಹಾಲೆಪ್ ವರ್ಷದ ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಆಘಾತ ಅನುಭವಿಸಿದ್ದಾರೆ. ಶುಕ್ರವಾರ ನಡೆದ...

ಸಿಮೋನಾ ಹಾಲೆಪ್‍
Shilpa D
Updated On : 12 Sept 2015, 10:30 am

ವಿಶ್ವದ ಎರಡನೇ ರ್ಯಾಂಕಿಂಗ್‍ನ ಆಟಗಾರ್ತಿ ಸಿಮೋನಾ ಹಾಲೆಪ್ ವರ್ಷದ ಗ್ರಾಂಡ್ ಸ್ಲಾಮ್  ಟೆನಿಸ್ ಟೂರ್ನಿಯಲ್ಲಿ  ಆಘಾತ ಅನುಭವಿಸಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ ಮೊದಲ ಸೆಮಿಫೈನಲ್ ಸುತ್ತಿನ ಪಂದ್ಯದಲ್ಲಿ ಸಿಮೋನಾ ಹಾಲೆಪ್, ತಮ್ಮ ಪ್ರತಿಸ್ಪರ್ಧಿ 26ನೇ ಶ್ರೇಯಾಂಕಿತೆ ಇಟಲಿಯ ಪ್ಲಾವಿಯಾ  ಪೆನೆಟ್ಟಾ ವಿರುದ್ಧ ಪರಾಭವ ಗೊಂಡು, ಟೂರ್ನಿಯಲ್ಲಿ ತಮ್ಮ ಹೋರಾಟ ಅಂತ್ಯ ಗೊಳಿಸಿದರು. ಕೇವಲ 59 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಹಾಲೆಪ್ ತೀವ್ರ ಆಘಾತಕಾರಿ ಸೋಲನುಭವಿಸಿದ್ದು, ಅಚ್ಚರಿ ಮೂಡಿಸಿತು.

ಟೂರ್ನಿಯ ಆರಂಭದಲ್ಲಿ ಮೂರನೇ ರ್ಯಾಂಕಿಂಗ್ ನ ರಷ್ಯಾದ ಆಟಗಾರ್ತಿ ಮರಿಯಾ ಶರಪೋವಾ  ಗಾಯದ ಸಮಸ್ಯೆಯಿಂದ ಹಿಂದೆ ಸರಿದ ನಂತರ ಐತಿಹಾಸಿಕ ಸಾಧನೆಯತ್ತ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್ ಗೆ ಫೈನಲ್‍ನಲ್ಲಿ ಪೈಪೋಟಿ ನೀಡುವ ನಿರೀಕ್ಷೆ ಹಾಲೆಪ್ ಹೆಗಲ ಮೇಲಿತ್ತು. ಇನ್ನು ಗುರುವಾರ ತಡರಾತ್ರಿ ನಡೆಯಬೇಕಿದ್ದ ಪಂದ್ಯಗಳು ಮಳೆಯಿಂದ ಅಡಚಣೆಗೊಳಗಾದ ಹಿನ್ನೆಲೆಯಲ್ಲಿ ಪಂದ್ಯಗಳು ಒಂದು ದಿನ ಮೂಂದೂಡಲಾಯಿತು. ಹಾಲಿ ಚಾಂಪಿಯನ್ಸೆರೆನಾ ವಿಲಿಯಮ್ಸ್ ಉಪಾಂತ್ಯ ಇಟಲಿಯ ರಾಬೆರ್ಟಾ ವಿನ್ಸಿ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಅಂತಿಮ ಪಂದ್ಯದಲ್ಲಿ ಫ್ಲಾವಿಯಾ ವಿರುದ್ಧ ಸೆಣಸಲಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments