ಪ್ಯಾಂಥರ್ಸ್ ಅಜೇಯ ಯಾತ್ರೆ ಅಬಾಧಿತ
ಮೂರನೇ ಕ್ರಮಾಂಕದ ಬ್ಯಾಟ್ಸ್ ಮನ್ ರೊಂಗ್ಸೆನ್ ಜೊನಾಥನ್ (77 ರನ್, 47 ಎಸೆತ, 5 ಬೌಂಡರಿ, 5 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್...ಎಸೆತ, 5 ಬೌಂಡರಿ, 1 ಸಿಕ್ಸರ್ ಮತ್ತು 3 ವಿಕೆಟ್) ಅವರ ಆಲ್ರೌಂಡ್ಪ್ರದರ್ಶನದ ನೆರವಿನಿಂದ
ಮೈಸೂರು:ಮೂರನೇ ಕ್ರಮಾಂಕದ ಬ್ಯಾಟ್ಸ್ ಮನ್ ರೊಂಗ್ಸೆನ್ ಜೊನಾಥನ್ (77 ರನ್, 47 ಎಸೆತ, 5 ಬೌಂಡರಿ, 5 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಪ್ರವೀಣ್ ದುಬೇ (ಅಜೇಯ 34 ರನ್, 17 ಎಸೆತ, 5 ಬೌಂಡರಿ, 1 ಸಿಕ್ಸರ್ ಮತ್ತು 3 ವಿಕೆಟ್) ಅವರ ಆಲ್ರೌಂಡ್
ಪ್ರದರ್ಶನದ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡ ತನ್ನ ಅಜೇಯ ಯಾತ್ರೆ ಮುಂದುವರೆಸಿದೆ.
ಶನಿವಾರ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ 5 ವಿಕೆಟ್‍ಗಳ ಅಂತರದಿಂದ ನಮ್ಮ ಶಿವಮೊಗ್ಗ ತಂಡವನ್ನು ಮಣಿಸಿತು. ಟಾಸ್ ಗೆದ್ದ ಬೆಳಗಾವಿ ಪ್ಯಾಂಥರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ನಮ್ಮ ಶಿವಮೊಗ್ಗ ತಂಡ 20 ಓವರ್‍ಗಳಲ್ಲಿ 7 ವಿಕೆಟ್‍ಗೆ 160 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ಸ್ ತಂಡ 18.4 ಓವರ್ ಗಳಲ್ಲಿ 5 ವಿಕೆಟ್‍ಗೆ 161 ರನ್ ದಾಖಲಿಸಿತು.
ಗಮನ ಸೆಳೆದ ಜೊನಾಥನ್:ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ಅತ್ಯುತ್ತಮ ಆರಂಭವೇನೂ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ರೆಡ್ಡಿ (12) ಹಾಗೂ ಮಯಾಂಕ್ ಅಗರ್‍ವಾಲ್ (12) ಹಾಗೂ ನಾಯಕ ವಿನಯ್ ಕುಮಾರ್ (9) ಬೇಗನೆ ವಿಕೆಟ್ ಒಪ್ಪಿಸಿದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೊಂಗ್ಸೆನ್ ಜೊನಾಥನ್ ತಂಡದ ಇನಿಂಗ್ಸ್ ಅನ್ನು ಅತ್ಯುತ್ತಮ ರೀತಿಯಲ್ಲಿ ಕಟ್ಟಿದರು. ಕೆಳ ಕ್ರಮಾಂಕದಲ್ಲಿ ಇನಿಂಗ್ಸ್ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಪ್ರವೀಣ್ ದುಬೇ
ತಂಡವನ್ನು ಬೇಗನೆ ಗೆಲುವಿನ ದಡ ಸೇರಿಸಿದರು.ನಮ್ಮ ಶಿವಮೊಗ್ಗ ತಂಡದ ಪರ ಭಾವೇಶ್ 2, ಆದಿತ್ಯ, ಶ್ರೇಯಸ್ ಮತ್ತು ಅಬ್ದುಲ್ ಕಾದೆರ್ ತಲಾ 1 ವಿಕೆಟ್ ಪಡೆದರು.
ಸಾದಿಕ್ ಆಟ ವ್ಯರ್ಥ
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ನಮ್ಮ ಶಿವಮೊಗ್ಗ ತಂಡಕ್ಕೆ ಆರಂಭಿಕ ಸಾದಿಕ್ ಕರ್ಮಾನಿ (56 ರನ್, 40 ಎಸೆತ, 6 ಬೌಂಡರಿ, 2 ಸಿಕ್ಸರ್) ಆಸರೆಯಾಗಿ ನಿಂತರು. ಇನಿಂಗ್ಸ್ ಆರಂಭದಿಂದ ಅಂತ್ಯದವರೆಗೂ ಸಾದಿಕ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ
ಸಾದಿಕ್ ತಂಡಕ್ಕೆ ಉತ್ತಮ ಹಾದಿ ಮಾಡಿಕೊಟ್ಟರು.
ಮೂರನೇ ಕ್ರಮಾಂಕದಲ್ಲಿ ಬಂದ ಕೌನೆಯಾನ್ ಅಬ್ಬಾಸ್ ಚುರುಕಿನ ಬ್ಯಾಟಿಂಗ್ ಮೂಲಕ 26 ರನ್ ದಾಖಲಿಸಿದರು.ನಂತರ ಬಂದ ಯಾವುದೇ ಬ್ಯಾಟ್ಸ್ ಮನ್ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ.ಮಧ್ಯಮ ಕ್ರಮಾಂಕದಲ್ಲಿನ ಹಿನ್ನಡೆ ತಂಡದ ಬೃಹತ್ ಗುರಿಯ ಕನಸು ನನಸಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್: ನಮ್ಮ ಶಿವಮೊಗ್ಗ 20 ಓವರ್‍ಗಳಲ್ಲಿ 7 ವಿಕೆಟ್‍ಗೆ 160 (ಸಾದಿಕ್ 56, ಅಬ್ಬಾಸ್ 26, ಪ್ರವೀಣ್ 31ಕ್ಕೆ 3) ಬೆಳಗಾವಿ ಪ್ಯಾಂಥರ್ಸ್ 18.4 ಓವರ್‍ಗಳಲ್ಲಿ 5 ವಿಕೆಟ್‍ಗೆ 161 (ಜೊನಾಥನ್ 77, ಪ್ರವೀಣ್ ಅಜೇಯ 34, ಭಾವೇಶ್ 31ಕ್ಕೆ 2) ಟಸ್ಕರ್ಸ್‍ಗೆ ಜಯ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಬಳ್ಳಾರಿ ಟಸ್ಕರ್ಸ್ ತಂಡ ಕೆಪಿಎಲ್ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡದ ವಿರುದ್ಧ ಜಯಿಸಿದೆ.
ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ 7 ರನ್‍ಗಳ ಅಂತರದಲ್ಲಿ ಮಂಗಳೂರು ತಂಡವನ್ನು ಮಣಿಸಿತು. ಟಾಸ್ ಗೆದ್ದ ಯುನೈಟೆಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ 20 ಓವರ್‍ಗಳಲ್ಲಿ 164ಕ್ಕೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಮಂಗಳೂರು ಯುನೈಟೆಡ್ ತಂಡ 20
ಓವರ್‍ಗಳಲ್ಲಿ 8 ವಿಕೆಟ್‍ಗೆ 157 ರನ್ ದಾಖಲಿಸಲಷ್ಟೇ ಶಕ್ತವಾಯಿತು. ಮಂಗಳೂರು ತಂಡದ ಪರ ರೋಹನ್ ಕದಮ್ (50 ರನ್, 41 ಎಸೆತ, 5 ಬೌಂಡರಿ) ಏಕಾಂಗಿಯಾಗಿ ಹೋರಾಟ ನಡೆಸಿದರೂ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ.