ಕ್ರೀಡೆ

ಅಜಿಂಕ್ಯ ರಹಾನೆಯಿಂದ ಬರ ಪೀಡಿತ ರೈತರಿಗೆ 5 ಲಕ್ಷ ದೇಣಿಗೆ

Lingaraj Badiger

ನವದೆಹಲಿ: ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅವರು ಸೋಮವಾರ ಬರ ಪೀಡಿತ ಪ್ರದೇಶದ ರೈತರಿಗೆ ನೆರವಾಗುವುದಕ್ಕಾಗಿ ಮಹಾರಾಷ್ಟ್ರ ಸರ್ಕಾರಕ್ಕೆ 5 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ.

ಮಹಾರಾಷ್ಟ್ರ ಸಹ ಹಲವು ರೈತರ ಆತ್ಮಹತ್ಯೆಗೆ ಸಾಕ್ಷಿಯಾಗಿದ್ದು, ರೈತರ ಸಂಕಷ್ಟಕ್ಕೆ ನೆರವಾಗಲು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ರಹಾನೆ ಕೈಜೋಡಿಸಿದ್ದಾರೆ.

2019ರೊಳಗೆ ಮಹಾರಾಷ್ಟ್ರವನ್ನು ಬರಮುಕ್ತ ಮಾಡಲು ಫಡ್ನವಿಸ್ ಸರ್ಕಾರ 'ಜಲ್‌ಯುಕ್ತ್ ಶಿವರ್ ಅಭಿಯಾನ' ಆರಂಭಿಸಿದೆ. ಈ ಅಭಿಯಾನಕ್ಕೆ 5 ಲಕ್ಷ ರುಪಾಯಿ ದೇಣಿಗೆ ನೀಡಿದ ಅಜಿಂಕ್ಯ ರಹಾನೆ ಅವರಿಗೆ ಸಿಎಂ ಧನ್ಯವಾದ ಹೇಳಿ ಟ್ವಿಟ್ ಮಾಡಿದ್ದಾರೆ.

SCROLL FOR NEXT