ಸಾನಿಯಾ ಮಿರ್ಜಾ, ಮಾರ್ಟಿನಾ ಹಿಂಗಿಸ್ 
ಕ್ರೀಡೆ

ಭಾರತಕ್ಕೆ ಡಬಲ್ ಖುಷಿ ಸಂಭ್ರಮ

ಅಮೆರಿಕ ನೆಲದಲ್ಲಿ ಕೋಟ್ಯಂತರ ಭಾರತೀಯರ ನಿರೀಕ್ಷೆ ಮತ್ತೊಮ್ಮೆ ಈಡೇರಿದೆ. ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಪತಾಕೆ ಮತ್ತೊಮ್ಮೆ ಬಾನೆತ್ತರಕ್ಕೆ ಹಾರಿದೆ...

ನ್ಯೂಯಾರ್ಕ್: ಅಮೆರಿಕ ನೆಲದಲ್ಲಿ ಕೋಟ್ಯಂತರ ಭಾರತೀಯರ ನಿರೀಕ್ಷೆ ಮತ್ತೊಮ್ಮೆ ಈಡೇರಿದೆ. ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಪತಾಕೆ ಮತ್ತೊಮ್ಮೆ ಬಾನೆತ್ತರಕ್ಕೆ ಹಾರಿದೆ.
ಮೊನ್ನೆಯಷ್ಟೇ ಭಾರತದ ಲಿಯಾಂಡರ್ ಪೇಸ್, ಸ್ವಿಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಜೋಡಿ, ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರ ಬೆನ್ನಿಗೇ, ಭಾನುವಾರ ರಾತ್ರಿ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್‍ಒನ್ ಡಬಲ್ಸ್ ಜೋಡಿ, ಭಾರತದ ಮತ್ತೊಬ್ಬ ಹಿರಿಯ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಪ್ರಶಸ್ತಿ ಮುಡಿಗೇರಿಸಿಕೊಂಡರು. 
ಇಲ್ಲಿನ ಅರ್ತರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಆಸ್ಟ್ರೇಲಿಯಾದ ಕ್ಯಾಸಿ ಡೆಲ್ಲಾಕ್ವಾ ಹಾಗೂ ಕಜಕಿಸ್ತಾನದ ಯರೊಸ್ಲಾವಾ ಶ್ವೆಡೊವಾ ಜೋಡಿಯ ವಿರುದ್ಧ ಸೆಣಸಿದ ಸಾನಿಯಾ ಹಾಗೂ ಮಾರ್ಟಿನಾ, 6-3, 6-3 ನೇರ ಸೆಟ್‍ಗಳಲ್ಲಿ ಜಯ ಸಾಧಿಸಿ ಪ್ರಶಸ್ತಿಗೆ ಭಾಜನರಾದರು. ಈ ಜಯದ ಮೂಲಕ ಪಾರಿತೋಷಕದ ಜತೆಗೆ ರು. 37 ಕೋಟಿ ಬಹುಮಾನ ಮೊತ್ತಕ್ಕೆ ಸಾನಿಯಾ ಜೋಡಿ ಪಾತ್ರವಾದರೆ, ಕ್ಯಾಸಿ-ಶ್ವೆಡೋವಾ ಜೋಡಿ ರು. 1 ಕೋಟಿ 82 ಲಕ್ಷ ಬಹುಮಾನ ಪಡೆಯಿತು. 
ಸುಮಾರು ಒಂದು ಗಂಟೆ 10 ನಿಮಿಷಗಳ ಕಾಲ ನಡೆದ ಪಂದ್ಯದ ಆರಂಭದಿಂದಲೂ ಉತ್ತಮ ಹಿಡಿತ ಸಾಧಿಸಿದ ಸಾನಿಯಾ-ಹಿಂಗಿಸ್, ಎದುರಾಳಿ ಜೋಡಿಗೆ ಭಾರಿ ಪೈಪೋಟಿ ನೀಡಿತು. ಇದರಿಂದ ತೀವ್ರ ಒತ್ತಡಕ್ಕೊಳಗಾದ ಕ್ಯಾಸಿ-ಶ್ವೆಡೋವಾ ಜೋಡಿ ಮೊದಲ ಸೆಟ್‍ನಲ್ಲಿ 6-3 ಅಂತರದಲ್ಲಿ ಸುಲಭವಾಗಿ ಮಣಿಯಿತು. ಇನ್ನು, ದ್ವಿತೀಯ ಸೆಟ್‍ನಲ್ಲೂ ಭಾರತ-ಸ್ವಿಜರ್ಲೆಂಡ್ ಜೋಡಿಯ ಆಲಾಪ ಮುಂದುವರಿದ ಪರಿಣಾಮ ಆ ಸೆಟ್‍ನಲ್ಲೂ ಎದುರಾಳಿಗಳು ಕೈಚೆಲ್ಲಿದರು. 
5ನೇ ಗ್ರ್ಯಾನ್ ಸ್ಲಾಂ: ಒಟ್ಟಾರೆಯಾಗಿ ಇದು ಸಾನಿಯಾ ಮಿರ್ಜಾ ಅವರ ವೃತ್ತಿಜೀವನದ 5ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ. 2009ರಲ್ಲಿ ಆಸ್ಟ್ರೇಲಿಯನ್ ಓಪನ್‍ನ ಮಿಶ್ರಡಬಲ್ಸ್ ಪ್ರಶಸ್ತಿಗೆ ಭಾಜನರಾಗಿದ್ದ ಅವರು, 2012ರಲ್ಲಿ ಫ್ರೆಂಚ್ ಓಪನ್ ಹಾಗೂ ಕಳೆದ ಬಾರಿ ಯುಎಸ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿ ಪಡೆದಿದ್ದರು. ಇನ್ನು, ಈ ವರ್ಷ ಜುಲೈನಲ್ಲಿ ಫ್ರೆಂಚ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದ ಅವರು, ಹಾಗೂ ಇದೀಗ ಯುಎಸ್ ಓಪನ್ ಗೆದ್ದಿದ್ದಾರೆ. ಇದಲ್ಲದೆ, ಎಲ್ಲಾ ಮಾದರಿಯ ಗ್ರ್ಯಾನ್ ಸ್ಲಾಂ ಪ್ರಶಸ್ತಿಯನ್ನು ಗಳಿಸಿದ ಹೆಗ್ಗಳಿಕೆಯೂ ಅವರ ಪಾಲಾಗಿದೆ. 13 ವರ್ಷ ವಯಸ್ಸಿನವರಾಗಿದ್ದಾಗ ಸಾನಿಯಾ ಮಿರ್ಜಾ ಅವರು, ವಿಂಬಲ್ಡನ್ ಬಾಲಕಿಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದಿದ್ದರು. 
ಹಿಂಗಿಸ್ ಜತೆ 5ನೇ ಪ್ರಶಸ್ತಿ: ಡಬಲ್ಸ್ ಪಂದ್ಯಗಳಲ್ಲಿ ಸಾನಿಯಾ ಅವರಿಗೆ ಮಾರ್ಟಿನಾ ಹಿಂಗಿಸ್ 70ನೇ ಜೋಡಿ. ಇದೇ ವರ್ಷ ಜೋಡಿಯಾದ ನಂತರ, ಈ ಇಬ್ಬರೂ ಯುಎಸ್ ಓಪನ್ ಪ್ರಶಸ್ತಿ ಸೇರಿದಂತೆ ಈವರೆಗೆ ಐದು ಪ್ರಶಸ್ತಿ ಪಡೆದಂತಾಗಿದೆ. ಇವುಗಳಲ್ಲಿ 2 ಗ್ರ್ಯಾನ್ ಸ್ಲಾಂ, 3 ಇತರ ಪಂದ್ಯಾವಳಿಯದ್ದು. ಇದೇ ವರ್ಷ ಇಂಡಿಯನಾ ವೆಲ್ಸ್‍ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಈ ಜೋಡಿ, ಆನಂತರ ಮಿಯಾಮಿ ಓಪನ್, ರೋಮ್ ಓಪನ್, ವಿಂಬಲ್ಡನ್‍ನಲ್ಲಿ ಪ್ರಶಸ್ತಿ ಬಾಚಿತ್ತು. ಇದೀಗ ಯುಎಸ್ ಓಪನ್ ನಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೇನಲ್ಲಿ ನಡೆದಿದ್ದ ರೋಮ್ ಓಪನ್‍ನಲ್ಲಿ ಫೈನಲ್‍ನಲ್ಲಿ ಮಾತ್ರ ಈ ಜೋಡಿ ಸೋಲು ಕಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT