ಕ್ರೀಡೆ

ಭಾರತದ ಯುವ ಟೆನಿಸಿಗ ಯೂಕಿ ಭಾಂಬ್ರಿ ಶ್ರೇಷ್ಠ ಸಾಧನೆ

Srinivas Rao BV

ನವದೆಹಲಿ:ಎಟಿಪಿ ಶಾಂಘೈ ಚಾಲೆಂಜರ್ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಅದ ಭಾರತದ ಯುವ ಟೆನಿಸಿಗ ಯೂಕಿ ಭಾಂಬ್ರಿ ಎಟಿಪಿ ರ್ಯಾಂಕಿಂಗ್ ಪಟ್ಟಿಯಲ್ಲಿ 125 ನೇ ಶ್ರೇಯಾಂಕಕ್ಕೆ ಏರುವುದರೊಂದಿಗೆ ವೃತ್ತಿಬದುಕಿನಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಈ ಋತುವಿನೊಳಗೆ ಅಗ್ರ ನೂರು ಆಟಗಾರರ ಪಟ್ಟಿಯಲ್ಲಿ ಗುರುತಿಸಿಕೊಳ್ಳಬೇಕೆಂದು ಪಣ ತೊಟ್ಟಿರುವ ಯೂಕಿ ಸೋಮವಾರ ಬಿಡುಗಡೆಯಾಗಿರುವ ನೂತನ ಎಟಿಪಿ ರ್ಯಾಂಕಿಂಗ್ ಪಟ್ಟಿಯಲ್ಲಿ ಈ ಸಾಧನೆ ಮೆರೆದಿದ್ದಾರೆ. ಶಾಂಘೈ ಗೆಲುವಿನಿಂದಾಗಿ ಅವರು 20 ಸ್ಥಾನಗಳ ಮುನ್ನಡೆಯೊಂದಿಗೆ 80 ಪಾಯಿಂಟ್ಸ್ ಗಳನ್ನು ಕಲೆಹಾಕಿದ್ದಾರೆ.

ಇತ್ತ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ ಸೋಮ ದೇವ್ ದೇವ್ ವರ್ಮನ್ 12 ಸ್ಥಾನಗಳ ಹಿನ್ನಡೆಯೊಂದಿಗೆ 164 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನುಳಿದಂತೆ ಸಾಕೇತ್ ಮೈನೇನಿ ನಾಲ್ಕು ಸ್ಥಾನಗಳ ಗಳಿಕೆಯಿಂದ 195 ನೇ ಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ರಾಮ್ ಕುಮಾರ್ ರಾಮನಾಥನ್ 218 ನೇ ಶ್ರೇಯಾಂಕ ಪಡೆದಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ 13 ನೇ ಸ್ಥಾನದಲ್ಲಿದ್ದರೆ. ಯುಎಸ್ ಓಪನ್ ಮಿಶ್ರ ಡಬಲ್ಸ್ ಗೆದ್ದ ಲಿಯಾಂದರ್ ಪೇಸ್ 33 ಮತ್ತು ಪುರಾವ್ ರಾಜಾ 95 ನೇ ಶ್ರೇಯಾಂಕ ಪಡೆದಿದ್ದಾರೆ. ಏತನ್ಮಧ್ಯೆ ಡಬ್ಲ್ಯೂಟಿಎ ರ್ಯಾಂಕಿಂಗ್ ನ ಮಹಿಳೆಯರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ಅವರ ಜತೆಯಾಟಗಾರ್ತಿ ಹಿಂಗಿಸ್ ನಂ.1 ಸ್ಥಾನ ಅಬಾಧಿತವಾಗಿದ್ದರೆ ಸಿಂಗಲ್ಸ್ ನಲ್ಲಿ 238 ನೇ ಶ್ರೇಯಾಂಕ ಪಡೆದಿದಿರುವ ಅಂಕಿತಾ ರೈನಾ ಭಾರತದ ಏಕಮೇವ ಸಿಂಗಲ್ಸ್ ಆಟಗಾರ್ತಿ ಎನಿಸಿದ್ದಾರೆ.

SCROLL FOR NEXT