ಕರಾಚಿ: ಕಳೆದ ವರ್ಷ ಭುವನೇಶ್ವರದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‍ನಲ್ಲಿ ಭಾರತದ ವಿರುದ್ಧ ಗೆದ್ದ ನಂತರ ಪಾಕಿಸ್ತಾನ ಆಟಗಾರರು ತೋರಿದ್ದ ಅಸಭ್ಯ ವರ್ತನೆ ಕುರಿತಂತೆ ಪಾಕಿಸ್ತಾನ ಹಾಕಿ ಸಂಸ್ಥೆ ಕ್ಷಮೆ ಯಾಚಿಸಬೇಕು ಎಂದು ಹಾಕಿ ಇಂಡಿಯಾ ಅಧ್ಯಕ್ಷ ನರೀಂದರ್ ಬಾತ್ರಾ ನೀಡಿದ್ದ ಹೇಳಿಕೆಗೆ ಪಾಕಿಸ್ತಾನ ಮಾಜಿ ರಾಷ್ಟ್ರೀಯ ಕೋಚ್ ಶಹನಾಜ್ ಶೇಖ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಕ್ಷಮೆ ಕೋರುವ ಅಗತ್ಯ ಪಾಕಿಸ್ತಾನಕ್ಕಿಲ್ಲ. ಸೆಮಿಫೈನಲ್ ಪಂದ್ಯದಲ್ಲಿ ತಾನು ಸೋತಿದ್ದನ್ನು ಭಾರತಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಇಂಥ ಅಸಂಬದ್ಧ ಹೇಳಿಕೆಗಳನ್ನು ಹಾಕಿ ಇಂಡಿಯಾ ನೀಡುತ್ತಿದೆ ಎಂದು ಅವರು ಪ್ರತಿಕ್ರಯಿಸಿದ್ದಾರೆ.