ಆಕಾಶ್ ದೀಪ್ ಸಿಂಗ್ 
ಕ್ರೀಡೆ

ಆಕಾಶ್ ದೀಪ್ ದುಬಾರಿ ಆಟಗಾರ

ಭರವಸೆ ಸ್ಟ್ರೈಕರ್ ಆಕಾಶ್ ದೀಪ್ ಸಿಂಗ್ ನಾಲ್ಕನೇ ಆವೃತ್ತಿಯ ಹಾಕಿ ಇಂಡಿಯಾ ಲೀಗ್ ಟೂರ್ನಿ ಆಟಗಾರರ ಹರಾಜಿನಲ್ಲಿ ದುಬಾರಿ ಭಾರತಿಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ನವದೆಹಲಿ: ಭರವಸೆ ಸ್ಟ್ರೈಕರ್ ಆಕಾಶ್ ದೀಪ್ ಸಿಂಗ್ ನಾಲ್ಕನೇ ಆವೃತ್ತಿಯ ಹಾಕಿ ಇಂಡಿಯಾ ಲೀಗ್ ಟೂರ್ನಿ ಆಟಗಾರರ ಹರಾಜಿನಲ್ಲಿ ದುಬಾರಿ ಭಾರತಿಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಇನ್ನು ಜರ್ಮನಿಯ ಮೊರಿಟ್ಜ್  ಫರ್ಟ್ಸೆ ದಾಖಲೆಯ ಮೊತ್ತಕ್ಕೆ ಮಾರಾಟವಾದರು. ಸೆ.18 ರಂದು ಹರಾಜು ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶ ಮಿಜಾರ್ಡ್ಸ್ ತಂಡವು ಆಕಾಶ್ ದೀಪ್ ಸಿಂಗ್ ಗೆ ರೂ 55 ಲಕ್ಷಕ್ಕೆ ಖರೀದಿಸಿತು. ವಿದೇಶಿ ಆಟಗಾರರ ಪೈಕಿ ಜರ್ಮನಿಯ ಮೊರಿಟ್ಜ್  ಅವರನ್ನು ಕಳಿಂಗಾ ಲ್ಯಾನ್ಸರ್ಸ್ ತಂದ ರೂ.69 ಲಕ್ಷ ಮೊತ್ತಕ್ಕೆ ಖರೀದಿಸಿತು. ಒಟ್ಟು 272 ಆಟಗಾರರ ಹೆಸರು ಹರಾಜು ಪ್ರಕ್ರಿಯೆಯಲ್ಲಿತ್ತಾದರೂ ಅಂತಿಮವಾಗಿ 89 ಆಟಗಾರರು ಹರಾಜಿನಲ್ಲಿ 6 ತಂಡಗಳ ಪಾಲಾದರು. ಆ ಮೂಲಕ ಉಳಿಕೆ ಆಟಗಾರರು ಸೇರಿದಂತೆ ಪ್ರತಿ ಫ್ರಾಂಚೈಸಿ 20 ಆಟಗಾರರೊಂದಿಗೆ ತಮ್ಮ ತಂಡವನ್ನು ಪೂರ್ಣಗೊಳಿಸಿದೆ.
ಈ ಹರಾಜು ಪ್ರಕ್ರಿಯೆಯಲ್ಲಿ 56 ಭಾರತೀಯ ಆಟಗಾರರು 33 ವಿದೇಶಿ ಆಟಗಾರರು ವಿವಿಧ ತಂಡಗಳಿಗೆ ಮಾರಾಟವಾಗಿದ್ದಾರೆ. ಉತ್ತರ ಪ್ರದೇಶ ಮಿಜಾರ್ಡ್ಸ್ ತಂಡದ ಪರ ಸಲಹಗಾರನಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ವಿ.ಆರ್ ರಘುನಾಥ್, ತಮ್ಮ ತಂಡಕ್ಕೆ ಆಕಾಶ್ ದೀಪ್ ಸಿಂಗ್ ರನ್ನು ಪಡೆಯಲು ಸಾಕಷ್ಟು ಪೈಪೋಟಿ ನಡೆಸಿದರು. ದಬಾಂಗ್ ಮುಂಬೈ ಮತ್ತು ರಾಂಚಿ ರೇಸ್ ತಂಡಗಳಿಂದ ತೀವ್ರ ಪೈಪೋಟಿ ಎದುರಿಸಿದರೂ ರಘುನಾಥ್, ಸ್ಟ್ರೈಕರ್ ಆಟಗಾರನನ್ನು ಇತರೆ ತಂಡಗಳಿಗೆ ಬಿಟ್ಟುಕೊಡಲಿಲ್ಲ.
ಹರಾಜಿನಲ್ಲಿ ಮಾರಾಟವಾಗದ ಆಟಗಾರರನ್ನು ರಿಸರ್ವ್ ವಿಭಾಗದಲ್ಲಿ ಇರಿಸಲಾಗಿದ್ದು, ಟೂರ್ನಿಯ ವೇಳೆ ಯಾವುದೇ ಆಟಗಾರ ಗಾಯಗೊಂಡರೆ, ಆತನ ಬದಲಿಗೆ ಈ ಆಟಗಾರರನ್ನು ಉಪಯೋಗಿಸಿಕೊಳ್ಳುವ ಅವಕಾಶವಿದೆ. ಜರ್ಮನಿಯ ಆಟಗಾರರಾದ ತೌಬಿಯಾಸ್ ಹೌಕೆ ಮತ್ತು ಫ್ಲೋರಿನ್ ಫಚಾಸ್ ತಲಾ ರೂ.63 ಲಕ್ಷಕ್ಕೆ ಕ್ರಮವಾಗಿ ಉತ್ತರ ಪ್ರದೇಶ ಮಿಜಾರ್ಡ್ಸ್ ಮತ್ತು ದಬಾಂಗ್ ಮುಂಬೈ ತಂಡಕ್ಕೆ ಬಿಕರಿಯಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT