ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಚಾರಿಟಿ ಪಂದ್ಯದಲ್ಲಿ ಮಿಂಚಿದ ಧೋನಿ

ಬ್ರಿಟೀಷ್ ಯೋಧರ ನೆರವಿಗಾಗಿ ನಡೆಸಲಾದ ಸೌಹಾರ್ದ ಪಂದ್ಯದಲ್ಲಿ ಹೆಲ್ಪ್ ಫಾರ್ ಹಿರೋಸ್ ತಂಡದ ಪರ ಮಹೇಂದ್ರ ಸಿಂಗ್ ಧೋನಿ ಗಮನಾರ್ಹ...

ಮಹೇಂದ್ರ ಸಿಂಗ್ ಧೋನಿ
Rashmi Kasaragodu
Updated On : 19 Sept 2015, 12:27 pm
ಲಂಡನ್: ಬ್ರಿಟೀಷ್ ಯೋಧರ ನೆರವಿಗಾಗಿ ನಡೆಸಲಾದ ಸೌಹಾರ್ದ ಪಂದ್ಯದಲ್ಲಿ ಹೆಲ್ಪ್ ಫಾರ್  ಹಿರೋಸ್ ತಂಡದ ಪರ ಮಹೇಂದ್ರ ಸಿಂಗ್ ಧೋನಿ ಗಮನಾರ್ಹ ಪ್ರದರ್ಶನ ನೀಡಿದ್ದು, ವಿಶ್ವ ಇತರೆ ಇಲೆವೆನ್ ತಂಡದ ವಿರುದ್ಧ ಜಯ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 20 ಸಾವಿರ ಪ್ರೇಕ್ಷಕರು ನೆರೆದಿದ್ದ ಓವಲ್ ಕ್ರೀಡಾಂಗಣದಲ್ಲಿ ವಿಶ್ವ ಇತರೆ ಇಲೆವೆನ್ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‍ಗಳಲ್ಲಿ 6 ವಿಕೆಟ್‍ಗೆ 158 ರನ್ ಪೇರಿಸಿತು. ಈ ಮೊತ್ತ ಬೆನ್ನಟ್ಟಿದ ಹೆಲ್ಪ್  ಫಾರ್ ಹಿರೋಸ್ ತಂಡ 19.3 ಓವರ್‍ಗಳಲ್ಲಿ 6 ವಿಕೆಟ್‍ಗೆ 159 ರನ್ ದಾಖಲಿಸಿತು. ಧೋನಿ 22 ಎಸೆತಗಳಲ್ಲಿ 38 ರನ್ ದಾಖಲಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೆಲ್ಪ್ ಫಾರ್ ಹಿರೋಸ್
ತಂಡದ ಪರ ಆಡಿದ ವಿರೇಂದ್ರ ಸೆಹ್ವಾಗ್ 25 ಎಸೆತಗಳಲ್ಲಿ 30 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್ 

Advertisement

Advertisement

ವಿಶ್ವ ಇತರೆ ಇಲೆವೆನ್ 20 ಓವರ್ಗ ಳಲ್ಲಿ 6 ವಿಕೆಟ್‍ಗೆ 158 (ಜಯವರ್ದನೆ 48, ಹೇಡನ್ 34, ಅಜರ್ ಮೆಹಮೂದ್ 22ಕ್ಕೆ 2) ಹೆಲ್ಪ್ ಫಾರ್ ಹಿರೋಸ್ 19.3 ಓವರ್‍ಗಳಲ್ಲಿ 6 ವಿಕೆಟ್‍ಗೆ 159 (ಧೋನಿ ಅಜೇಯ 38, ಸೆಹ್ವಾಗ್ 30, ಸ್ಟ್ರಾಸ್ 26, ವೆಟೋರಿ 28ಕ್ಕೆ 3)
ಪಂದ್ಯಶ್ರೇಷ್ಠ: ಮಹೇಂದ್ರ ಸಿಂಗ್ ಧೋನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement