ಕ್ರೀಡೆ

ಗಂಡನ ಟ್ಯಾಟು ಬೇಡ ಎಂದ ವಿಕ್ಟೋರಿಯಾ

Vishwanath S

ಡೇವಿಡ್ ಬೆಕ್‍ಹ್ಯಾಮ್ ಮತ್ತು ವಿಕ್ಟೋರಿಯಾ ಬೆಕ್‍ಹ್ಯಾಮ್ ಇದುವರೆಗೆ ಎಲ್ಲರ ಕಣ್ಣು ಕುಕ್ಕುವಂಥ ಜೋಡಿಯಾಗಿತ್ತು. ಇನ್ನು ಮುಂದೆ ಹಾಗಿಲ್ಲವೆಂದು ತೋರುತ್ತದೆ.

ಯಾಕೆಂದರೆ ವಿಕ್ಟೋರಿಯಾ ತನ್ನ ಮೈಯಲ್ಲಿ ಹಾಕಿಸಿಕೊಂಡ ಗಂಡನ ಹೆಸರಿನ ಹಚ್ಚೆಯನ್ನೆಲ್ಲಾ ಲೇಸರ್ ಚಿಕಿತ್ಸೆ ಮೂಲಕ ಕೆತ್ತಿ ತೆಗೆಸಿಕೊಳ್ಳುತ್ತಿದ್ದಾಳಂತೆ. ಫುಟ್ಬಾಲ್ ಆಟಗಾರ ಮತ್ತು ಗಾಯಕಿಯ ಈ ದಾಂಪತ್ಯಕ್ಕೆ ನಾಲ್ವರು ಮುದ್ದಾದ ಮಕ್ಕಳಿದ್ದಾರೆ.

'ನಾನೆಂದರೆ ನನ್ನವನು, ನನ್ನವನೆಂದರೆ ನಾನು' ಎಂದು ಹೀಬ್ರೂ ಭಾಷೆಯಲ್ಲಿ ಬೆನ್ನು ಮೂಳೆಯ ಮೇಲೆ ಈಕೆ ತುಂಬಾ ಹಿಂದೆ ಹಚ್ಚೆ ಹಾಕಿಸಿಕೊಂಡಿದ್ದಳು. ಅದನ್ನು ಕೀಳಿಸುವುದೆಂದರೆ 16 ವರ್ಷದ ದಾಂಪತ್ಯಕ್ಕೆ ಎಳ್ಳು ನೀರು ಬಿಡುತ್ತಿದ್ದಾಳೆಂದೇ ಅರ್ಥ ಎಂದು ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ.

ಆದರೆ ಅದು ಹಾಗಲ್ಲ, ಆಕೆ ಇನ್ನ ಹೆಚ್ಚು ಹೆಚ್ಚಾಗಿ ಫ್ಯಾಶನ್ ಜಗತ್ತಿನಲ್ಲಿ ಕಾಣಿಸಿಕೊಳ್ಳಲಿಚ್ಛಿಸಿದ್ದಾಳೆ. ಅದಕ್ಕೇ ಈ ನಡೆ ಎನ್ನುತ್ತಿದ್ದಾರೆ.

SCROLL FOR NEXT