ನವದೆಹಲಿ: ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ವಿಶ್ವ ಗುಂಪಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ಭಾರತ ತಂಡ, ಏಷ್ಯಾ ಒಷೇನಿಯಾ ವಲಯದಲ್ಲಿ ಅಗ್ರ ಶ್ರೇಯಾಂಕ ಪಡೆದಿದೆ.ಮಂಗಳವಾರ ಸ್ಯಾಂಟಿಯಾಗೋದಲ್ಲಿ ನಡೆದ ಅಂತಾರಾಷ್ಟ್ರೀಯ ಟೆನಿಸ್ ಒಕ್ಕೂಟದ ವಾರ್ಷಿಕಾ ಮಹಾ ಸಭೆಯಲ್ಲಿ ಮುಂದಿನ ವರ್ಷ ಡೇವಿಸ್ ಕಪ್‍ನ ಡ್ರಾ ಬಿಡುಗಡೆ ಮಾಡಲಾಯಿತು. ಭಾರತಕ್ಕೆ ಏಷ್ಯಾ ವಲಯದಲ್ಲಿ ನಂಬರ್ ಒನ್ ಶ್ರೇಯಾಂಕ ಲಬಿsಸಿದರೆ, ಉಜ್ಬೇಕಿಸ್ತಾ ನಕ್ಕೆ ದ್ವಿತೀಯ ಸ್ಥಾನ ಸಿಕ್ಕಿತು. ಹಾಗಾಗಿ ಈ ಎರಡು ತಂಡಗಳು ಮುಂದಿನ ಋತುವಿನ ಮೊದಲ ಸುತ್ತಿನಲ್ಲಿ ಬೈ ಪಡೆದಿವೆ. ವಿಶ್ವ ರ್ಯಾಂಕಿಂಗ್‍ನಲ್ಲಿ ಭಾರತ 21, ಉಜ್ಬೇಕಿಸ್ತಾನ 25ರಲ್ಲಿವೆ.