ಇಸ್ಲಾಮಾಬಾದ್ : ಇದೇ ಡಿಸೆಂಬರ್ ತಿಂಗಳಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣದ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯಾವಳಿಯ ನಡೆಯುತ್ತದೆ ಎಂಬ ಆಶಾಭಾವವು ಕ್ಷೀಣಿಸುತ್ತಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಹರ್ಯಾರ್ ಖಾನ್ ತಿಳಿಸಿದ್ದಾರೆ. ಪರಸ್ಪರರ ಒಪ್ಪಂದದ ಪ್ರಕಾರ 2015ರಿಂದ 2023ರವರೆಗೆ ಉಭಯರ ನಡುವೆ ಆರು ದ್ವಿಪಕ್ಷೀಯ ಸರಣಿ ನಡೆಯಬೇಕಿದೆ. ``ನಾವು ಬಿಸಿಸಿಐ ಮುಂದೆ ಮೊಣಕಾಲೂರಿ ಯೋಚಿಸಲು ಬಯಸುವುದಿಲ್ಲ. ಒಪ್ಪಂದದಂತೆ ನಡೆದುಕೊಳ್ಳುತ್ತೀರೋ ಇಲ್ಲವೋ ಎಂದಷ್ಟೇ ಸ್ಪಷ್ಟನೆಯನ್ನು ಬಯಸುತ್ತಿದ್ದೇವೆ'' ಎಂದುಲಾಹೋರ್‍ನಲ್ಲಿ ಪಿಸಿಬಿ ಅಧ್ಯಕ್ಷ ತಿಳಿಸಿದ್ದಾರೆ.