ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹಿಂಗಿಸ್ ಬೆಸ್ಟ್ ಎನ್ನಬೇಡಿ

ವೃತ್ತಿಬದುಕಿನಲ್ಲಿ ವಿವಿಧ ಆಟಗಾರ್ತಿಯರೊಂದಿಗೆ ತಾನು ಆಟವಾಡಿದ್ದು, ಸ್ವಿಟ್ಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಅವರನ್ನು ಮಾತ್ರ ತನ್ನ ಅತ್ಯುತ್ತಮ ಜತೆಯಾಟಗಾರ್ತಿ...

ಸಾನಿಯಾ ಮಿರ್ಜಾ
Rashmi Kasaragodu
Updated On : 23 Sept 2015, 12:02 pm
ಮುಂಬೈ: ವೃತ್ತಿಬದುಕಿನಲ್ಲಿ ವಿವಿಧ ಆಟಗಾರ್ತಿಯರೊಂದಿಗೆ ತಾನು ಆಟವಾಡಿದ್ದು, ಸ್ವಿಟ್ಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಅವರನ್ನು ಮಾತ್ರ ತನ್ನ ಅತ್ಯುತ್ತಮ ಜತೆಯಾಟಗಾರ್ತಿ ಎಂದು ಬಿಂಬಿಸುವುದು ಮಿಕ್ಕ ಆಟಗಾರ್ತಿಯರಿಗೆ ಅಪಚಾರವೆಸಗಿದಂತೆ ಎಂದು ಭಾರತದ ಹೆಸರಾಂತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಭಿಪ್ರಾಯಿಸಿದ್ದಾರೆ. ಕ್ರಿಕೆಟ್ ಕ್ಲಬ್ ಆಫ್  ಇಂಡಿಯಾದ ಶಾಶ್ವತ ಸದಸ್ಯತ್ವ ಪಡೆದ ಸಮಾರಂಭದಲ್ಲಿ ಭಾಗವಹಿಸಿ ಸುದ್ದಿಗಾರರ ಜತೆಗೆ ಮಾತನಾಡಿದ ಸಾನಿಯಾ, ``ಜಿಂಬಾಬ್ವೆಯ ಕಾರಾ ಬ್ಲಾಕ್ ಜತೆಗೂಡಿ ಡಬ್ಲ್ಯೂಟಿಎ ಪ್ರಶಸ್ತಿ ಜಯಿಸಿದ್ದೇನೆ. ಅಮೆರಿಕದ ಎಲೆನಾ ವೆಸ್ನಿನಾ ಜತೆಗೂಡಿ ಎರಡು ಬಾರಿ ಗ್ರಾಂಡ್
ಸ್ಲಾಮ್  ಪ್ರಶಸ್ತಿ ಜಯಿಸುವ ಸಮೀಪಕ್ಕೆ ಸಾಗಿದ್ದೇನೆ. ಮಾರ್ಟಿನಾ ಮತ್ತು ನಾನು ಈಗ ಉತ್ತಮವಾಗಿ ಆಡುತ್ತಿದ್ದರೂ, ಅವರೊಬ್ಬರೇ ನನ್ನ ಬೆಸ್ಟ್ ಪಾರ್ಟ್‍ನರ್ ಎಂಬ ಮಾತನ್ನು ಒಪ್ಪಿಕೊಳ್ಳುವುದು ಕಷ್ಟ'' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement