ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಾಂಗ್ಲಾ ಪ್ರತಿರೋಧ

ಮೊದಲ ಇನಿಂಗ್ಸ್ ನಲ್ಲಿ ಕುಸಿತ ಕಂಡರೂ ಎರಡನೇ ಇನಿಂಗ್ಸ್ ನಲ್ಲಿ ಪ್ರತಿರೋಧ ನೀಡಿರುವ ಪ್ರವಾಸಿ ಬಾಂಗ್ಲಾದೇಶ ಎ ತಂಡ...

ಶಿಶಿರ್ ಭವಾನೆ, ಸುಚಿತ್ ಮತ್ತು ಉದಿತ್ ಜೊತೆಯಾಟದೊಂದಿಗೆ ಕರ್ನಾಟಕ 129 ರನ್ ಮುನ್ನಡೆ ಸಾಧಿಸಿತು.
Sumana Upadhyaya
Updated On : 24 Sept 2015, 10:02 am

ಮೈಸೂರು: ಮೊದಲ ಇನಿಂಗ್ಸ್ ನಲ್ಲಿ ಕುಸಿತ ಕಂಡರೂ ಎರಡನೇ ಇನಿಂಗ್ಸ್ ನಲ್ಲಿ ಪ್ರತಿರೋಧ ನೀಡಿರುವ ಪ್ರವಾಸಿ ಬಾಂಗ್ಲಾದೇಶ ಎ ತಂಡ ರಣಜಿ ಚಾಂಪಿಯನ್ ಕರ್ನಾಟಕ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಚೇತರಿಕೆಯ ಹೆಜ್ಜೆ ಇಟ್ಟಿದೆ.

ಪಂದ್ಯದ ಎರಡನೇ ದಿನವಾದ ಬುಧವಾರ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಿನದಾಟ ಮುಂದುವರೆಸಿದ ಕರ್ನಾಟಕ ತಂಡ 92.3 ಓವರ್ ಗಳಲ್ಲಿ 287 ರನ್‍ಗಳಿಗೆ ಆಲೌಟ್ ಆಯಿತು. ಆ ಮೂಲಕ ಪ್ರವಾಸಿಗರ ವಿರುದ್ಧ 119 ರನ್‍ಗಳ ಮುನ್ನಡೆ ಪಡೆಯಿತು.ನಂತರ ಬಾಂಗ್ಲಾದೇಶ ತನ್ನ ಎರಡನೇ ಇನಿಂಗ್ಸ್ ಆರಂಭಿಸಿ 44 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 188 ರನ್ ದಾಖಲಿಸಿದೆ.ಆ ಮೂಲಕ 59 ರನ್ ಮುನ್ನಡೆ ಪಡೆದಿದೆ.

ಉತ್ತಮ ಮುನ್ನಡೆ: ಮೊದಲ ದಿನದಾಟದ ಮೊತ್ತ 163 ರನ್‍ಗಳಿಗೆ 6 ವಿಕೆಟ್‍ನಿಂದ ಎರಡನೇ ದಿನದಾಟ ಆರಂಭಿಸಿದ ಕರ್ನಾಟಕ ತಂಡ, ಉತ್ತಮ ರೀತಿಯಲ್ಲೇ ಬ್ಯಾಟಿಂಗ್ ನಡೆಸಿತು.ಬಾಂಗ್ಲಾದೇಶ ಪರ ಬೌಲಿಂಗ್ ನಲ್ಲಿ ಸಕ್ಲೈನ್ ಸಾಜಿದ್ ಮತ್ತು ಶುವಗಟ ಹೊಮ್ ತಲಾ 4, ಅಲ್ ಅಮೀನ್ ಮತ್ತು ಜುಬೈರ್ ತಲಾ 1 ವಿಕೆಟ್ ಪಡೆದರು.

ಅನಾಮುಲ್ ಆಸರೆ: ಇತ್ತ ಎರಡನೇ ಇನಿಂಗ್ಸ್ ಆರಂಭಿಸಿದ ಆರಂಭಿಕ ಅನಾಮುಲ್ ಹಕ್ (89 ರನ್, 87 ಎಸೆತ, 8 ಬೌಂಡರಿ, 5 ಸಿಕ್ಸರ್ ) ಅವರ ದಿಟ್ಟ ಬ್ಯಾಟಿಂಗ್ ಪ್ರದರ್ಶನ ಪ್ರವಾಸಿ ತಂಡ ಚೇತರಿಸಿಕೊಳ್ಳುವಂತೆ ಮಾಡಿತು. ಮತ್ತೊಬ್ಬ ಆರಂಭಿಕ ರೊನಿ ತಾಲೂಕ್ದಾರ್ (15), ನಾಯಕ ಮೊಮಿನುಲ್ ಹಕ್ (22) ಹೆಚ್ಚು ರನ್ ಗಳಿಸಲಿಲ್ಲ. ಮುರಿಯದ ನಾಲ್ಕನೇ ವಿಕೆಟ್ ಗೆ ಜತೆಯಾದ ಲಿಂಟನ್ ದಾಸ್ (ಅಜೇಯ 37) ಮತ್ತು ಸೌಮ್ಯ ಸರ್ಕಾರ್(24) ಉತ್ತಮ ಜತೆಯಾಟದ ಮೂಲಕ ಇನಿಂಗ್ಸ್ ಕಟ್ಟುತ್ತಿದ್ದಾರೆ. ಕರ್ನಾಟಕದ ಪರ ಉದಿತ್ 2, ಸುಚಿತ್ 1 ವಿಕೆಟ್ ಪಡೆದರು. ಗುರುವಾರ ಪಂದ್ಯದ ಕೊನೇ ದಿನವಾಗಿದ್ದು, ಬಾಂಗ್ಲಾ ಎ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ಪಂದ್ಯ ಡ್ರಾ ಫಲಿತಾಂಶ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ ಮೊದಲ ಇನಿಂಗ್ಸ್ 158 ಕರ್ನಾಟಕ ಮೊದಲ ಇನಿಂಗ್ಸ್ 287 (ಶಿಶಿರ್ 88, ಸುಚಿತ್ 41, ಉದಿತ್ 40, ಸಕ್ಲೈನ್ 85ಕ್ಕೆ 4, ಶುವಗಟ 45ಕ್ಕೆ 4) ಬಾಂಗ್ಲಾದೇಶ ಎರಡನೇ ಇನಿಂಗ್ಸ್ 44 ಓವರ್‍ಗಳಲ್ಲಿ 3 ವಿಕೆಟ್‍ಗೆ 188 (ಅನಾಮುಲ್ 89, ಲಿಂಟನ್ ಅಜೇಯ 37, ಸೌಮ್ಯ ಸರ್ಕಾರ್ ಅಜೇಯ 24, ಉದಿತ್ 44ಕ್ಕೆ 2,ಸುಚಿತ್ 45ಕ್ಕೆ 1)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement