ಮುಂಬೈಗೆ ಫ್ಲಾವಿಯಾ ಪೆನ್ನೆಟ್ಟಾ
ಇತ್ತೀಚೆಗಷ್ಟೇ ಯುಎಸ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸಿದ ಇಟಲಿಯ ಫ್ಲಾವಿಯಾ ಪೆನ್ನೆಟ್ಟಾ, ಈ ವರ್ಷಾಂತ್ಯದಲ್ಲಿ ನಡೆಯಲಿರುವ 2ನೇ ಚಾಂಪಿಯನ್ಸ್ ಟೆನಿಸ್ ಲೀಗ್...
ಮುಂಬೈ: ಇತ್ತೀಚೆಗಷ್ಟೇ ಯುಎಸ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸಿದ ಇಟಲಿಯ ಫ್ಲಾವಿಯಾ ಪೆನ್ನೆಟ್ಟಾ, ಈ ವರ್ಷಾಂತ್ಯದಲ್ಲಿ ನಡೆಯಲಿರುವ 2ನೇ ಚಾಂಪಿಯನ್ಸ್ ಟೆನಿಸ್ ಲೀಗ್ (ಸಿಟಿಎಲ್) ನಲ್ಲಿ ಮುಂಬೈ ಮಾಸ್ಟರ್ಸ್ ಪರ ಆಡಲು ಭಾರತಕ್ಕೆ ಆಗಮಿಸಲಿದ್ದಾರೆ.
ಅಲ್ಲದೆ ಹಾಲೆಂಡ್ ಆಟಗಾರ, 1996ರ ವಿಂಬಲ್ಡನ್ ಚಾಂಪಿಯನ್ ರಿಚರ್ಡ್ ಕ್ರಾಜಿಸೆಕ್ ಕೂಡ ಮುಂಬೈ ಪರ ಆಡಲಿದ್ದಾರೆ. ಭಾರತದ ಮಾಜಿ ಡೇವಿಸ್ ಕಪ್ ತಂಡದ ನಾಯಕ ವಿಜಯ್ ಅಮೃತ್ ರಾಜ್ ಕನಸಿನ ಕೂಸಾ ದ ಸಿಟಿಎಲ್ನ ಎರಡನೇ ಆವೃತ್ತಿಯು ನ.23 ರಿಂದ ಡಿ. 6ರವರೆಗೆ ಜರುಗಲಿದೆ. ಚಾಂಪಿಯನ್ ತಂಡ ರು. 1 ಕೋಟಿ, ರನ್ನರ್ ಅಪ್ ತಂಡ ರು. 50 ಲಕ್ಷ ಬಹು ಮಾನ ಪಡೆಯಲಿದೆ ಎಂದು ಬುಧವಾರ ಸುದ್ದಿಗೋ ಷ್ಠಿಯಲ್ಲಿ ವಿಜಯ್ ಅಮೃತ್ರಾಜ್ ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.