ಕೋಲ್ಕತಾ: ಜಗಮೋಹನ್ ದಾಲ್ಮಿಯಾ ನಿಧನದ ಹಿನ್ನೆಲೆಯಲ್ಲಿ ಬಂಗಾಳ ಕ್ರಿಕೆಟ್ ಮಂಡಳಿ (ಸಿಎಬಿ)ಯ ನೂತನ ಅಧ್ಯಕ್ಷರಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಈ ಸಂಬಂಧ ಬುಧವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕಂಡು ದಾದಾ ಮಾತುಕತೆ ನಡೆಸಿದರು.
ಪ್ರಸಕ್ತ ಸಿಎಬಿಯ ಜಂಟಿ ಕಾರ್ಯದರ್ಶಿಯೂ ಆಗಿರುವ ಸೌರವ್ ಆಡಳಿತಾಧಿ ಕಾರಿಯಾಗಿ ಹೆಚ್ಚೇನೂ ಅನುಭವ ಹೊಂದಿಲ್ಲ. ಸಿಎಬಿ ಪದಾಧಿಕಾರಿಯಾಗಿ ಕೇವಲ 12 ತಿಂಗಳಷ್ಟೇ ಕಳೆದಿವೆ. ಇದು ಅವರ ವಿರೋಧಿ ಬಣಕ್ಕೆ ಪ್ರಮುಖ ಆಕ್ಷೇಪದ ದಾಳವಾಗಿ ಪರಿಣಮಿಸುವ ಸಂಭವ ವಿದ್ದರೂ, ಮಮತಾ ಬ್ಯಾನರ್ಜಿ ಕೃಪಾಕಟಾಕ್ಷ ಸೌರವ್ ನೆರವಿಗೆ ಬರಲಿದೆ ಎಂಬ ಮಾತೂ ಇದೆ.