ಬೆಂಗಳೂರು: ಜಗಮೋಹನ್ ದಾಲ್ಮಿಯಾ ಅವರ ನಿಧನದಿಂದ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆ ಯಲ್ಲಿ ಸಾಕಷ್ಟು ಕಸರತ್ತುಗಳು ಆರಂಭವಾಗಿದ್ದು, ಈ ಹುದ್ದೆಗೆ ಕೆಲ ಪ್ರಮುಖರ ಹೆಸರು ಕೇಳಿ ಬರುತ್ತಿ ವೆಯಾದರೂ, ಸಾಕಷ್ಟು ಗೊಂದಲ ಗಳ ಮಧ್ಯೆ ಯಾರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆಂಬ ಕೌತುಕ ಘಟ್ಟಕ್ಕೆ ಉದ್ಯಾನನಗರಿ ಬೆಂಗಳೂರು ಸಾಕ್ಷಿಯಾಗಲಿದೆ.
ಬಿಸಿಸಿಐ ಅನ್ನು ನಿಯಂತ್ರಿಸುವ ವಿಷಯದಲ್ಲಿ ಸದಾ ಮುಂಚೂ ಣಿಯಲ್ಲಿರುವ ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್ ಮತ್ತೊಮ್ಮೆ ಒದಗಿ ಬಂದಿರುವ ಈ ಅವಕಾಶವನ್ನು ಬಾಚಿಕೊಂಡಿದ್ದಾರೆ. ತಮ್ಮ ಆಣತಿ ಯಂತೆ ನಡೆಯುವ ವರನ್ನೇ ಗದ್ದು ಗೆಯ ಮೇಲೆ ಕೂರಿಸಲು ರಣತಂತ್ರ ರೂಪಿಸುತ್ತಿರುವ ಶ್ರೀನಿ, ಗುರುವಾರ ನಗರದಲ್ಲಿ ತಮ್ಮ ಆಪ್ತರೊಂದಿಗೆ ಅನೌಪಚಾರಿಕ ಸಭೆ ನಡೆಸಲಿದ್ದಾರೆ. 8 ರಿಂದ 9 ಯುನಿಟ್‍ಗಳು ಸಭೆಯಲ್ಲಿ ಭಾಗವಹಿಸಲಿದ್ದು, ದಾಲ್ಮಿಯಾ ಅವರ ಸ್ಥಾನವನ್ನು ತುಂಬಬಲ್ಲ ಅಭ್ಯರ್ಥಿಗಳ ಪಟ್ಟಿ ಮತ್ತು ವಿಶೇಷ ವಾರ್ಷಿಕ ಮಹಾ ಸಭೆಯನ್ನು ನಡೆಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.
'ನಾನು ಕೆಲ ವ್ಯಕ್ತಿಗಳನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದೇನೆ. ಅಲ್ಲದೆ ಭವಿಷ್ಯದಲ್ಲಿನ ಬೆಳವಣಿಗೆ ಗಳ ಬಗ್ಗೆ ಚಿತ್ರಣ ಪಡೆಯಲು ತೆರಳುತ್ತಿದ್ದೇನೆ'' ಎಂದು ಶ್ರೀನಿ ಅವರ ಆಪ್ತರೊಬ್ಬರು ತಿಳಿಸಿದ್ದಾರೆ. ಇನ್ನು ಅಧ್ಯಕ್ಷ ಸ್ಥಾನದ ಮುಂಚೂಣಿಯಲ್ಲಿರುವ ಅಮಿತಾಬ್ ಚೌಧರಿ ಸಹ ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ದಕ್ಷಿಣ ವಲಯಹಾಗೂ ಪೂರ್ವ ವಲಯದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅ.2ರಂದು ಈಡನ್ ಗಾರ್ಡನ್ ಕ್ರೀಡಾಂಗಣ ದಲ್ಲಿ ನಡೆಯಲಿರುವ ದಾಲ್ಮಿಯಾ ಅವರ ಸಂತಾಪ ಸಭೆಯವರೆಗೂ ಬಂಗಾಳ ಕ್ರಿಕೆಟ್ ಸಂಸ್ಥೆ ಯಾವುದೇ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ಹಾಗಾಗಿ ಸಭೆಗೆ ಸಿಎಬಿಯಿಂದ ಯಾವುದೇ ಅಧಿಕಾರಿ ಗಳು ಹಾಜರಾಗುವುದಿಲ್ಲ.
ಶುಕ್ಲಾ ಪರ ಠಾಕೂರ್ ಬ್ಯಾಟಿಂಗ್? ಈ ಮಧ್ಯೆ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಪೂರ್ವ ವಲಯದ ಕೆಲ ಸಂಸ್ಥೆಗಳ ಅಧಿಕಾರಿಗಳ ಜತೆ ಮಾತು ಕತೆ ನಡೆಸಿದ್ದು, ಶುಕ್ಲಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಕುರಿತು ಅಭಿಪ್ರಾಯ ಸಂಗ್ರಹಿಸಿರುವ ಮಾತುಗಳು ಕೇಳಿಬಂದಿವೆ. ಕಳೆದ ಬಾರಿಯ ಬಿಸಿಸಿಐ ಮಹಾ ಸಭೆಯಲ್ಲಿ ಮಂಡಳಿಯ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಜೀವ್ ಶುಕ್ಲಾ, ಶ್ರೀನಿ ಆಪ್ತ ಅನಿರುದ್ಧ ಚೌಧರಿ ವಿರುದ್ಧ ಸೋತಿದ್ದರು. 'ಈಗಲೇ ಬಿಸಿಸಿಐ ಅಧ್ಯಕ್ಷ ಸ್ಥಾನದ ಬಗ್ಗೆ ಹೇಳಲು ಹೇಗೆ ಸಾಧ್ಯ? ಆ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ಕಾರ್ಯದರ್ಶಿ ವಿಶೇಷ ಮಹಾಸಭೆ ಕರೆಯಲಿದ್ದಾರೆ. ಅಲ್ಲಿ ಈ ಬಗ್ಗೆ ಚರ್ಚೆ ನಡೆಸಲಾ ಗುವುದು. ಅಲ್ಲೀವರೆಗೂ ಈ ಬಗ್ಗೆ ಮಾತನಾಡುವುದು ಸರಿಯಲ್ಲ'' ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ. ಶ್ರೀನಿವಾಸನ್ ಭಾಗವಹಿಸಿದರೆ, ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos