ಸಾನಿಯಾ ಮಿರ್ಜಾ- ಮಾರ್ಟಿನಾ ಹಿಂಗಿಸ್ 
ಕ್ರೀಡೆ

ಸಾನಿಯಾ- ಹಿಂಗಿಸ್ ಗೆ ಮತ್ತೊಂದು ಗರಿ

ಪ್ರಚಂಡ ಫಾರ್ಮ್ ನಲ್ಲಿರುವ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಈ ಋತುವಿನಲ್ಲಿ ಮತ್ತೊಂದು ಪ್ರಶಸ್ತಿಯನ್ನು ಜಯಿಸಿ ಸಂಭ್ರಮಿಸಿದೆ.

ಗುವಂಗ್ಜೌ: ಪ್ರಚಂಡ ಫಾರ್ಮ್ ನಲ್ಲಿರುವ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಈ ಋತುವಿನಲ್ಲಿ ಮತ್ತೊಂದು ಪ್ರಶಸ್ತಿಯನ್ನು ಜಯಿಸಿ ಸಂಭ್ರಮಿಸಿದೆ.

ಶನಿವಾರವಷ್ಟೇ ಮುಕ್ತಾಯಗೊಂಡ ಗುವಂಗ್ಜೌ ಡಬ್ಲ್ಯೂಟಿಎ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಈ ಇಂಡೋ-ಸ್ವಿಸ್ ಜೋಡಿ ಚಾಂಪಿಯನ್ ಎನಿಸಿತು. ಪ್ರಶಸ್ತಿ ಸುತ್ತಿನ ಸೆಣೆಸಾಟದಲ್ಲಿ ಅಗ್ರಶ್ರೇಯಾಂಕಿತ ಜೋಡಿಯಾದ ಸಾನಿಯಾ ಮತ್ತು ಹಿಂಗಿಸ್ ಶ್ರೇಯಾಂಕ ರಹಿತ ಆಟಗಾರ್ತಿಯಾದ ಚೀನಾದ ಶಿಲಿನ್ ಕಸು ಹಾಗೂ ಕ್ಸಿಯೋಡಿ ಯು ವಿರುದ್ಧ 6 -3 ,6 -1 ರ ಎರಡು ನೇರ ಸೆಟ್ ಗಳ ಆಟದಲ್ಲಿ ಮಣಿಸಿ ಪ್ರಶಸ್ತಿ ಪಡೆದರು.

ಕಳೆದ 2015 ಮಾರ್ಚ್ ತಿಂಗಳಿನಲ್ಲಿ ಜತೆಯಾದ ಕ್ಷಣದಿಂದಲೂ ಅದ್ವಿತೀಯ ಪ್ರದರ್ಶನ ನೀಡುತ್ತಾ ಸಾಗಿರುವ ಸಾನಿಯಾ ಮತ್ತು ಹಿಂಗಿಸ್ ಕೇವಲ 58 ನಿಮಿಷಗಳಲ್ಲೇ ಪಂದ್ಯವನ್ನು ಕೈವಶಮಾಡಿಕೊಂಡರು. ಈಗಾಗಳೇ ಈ ಋತುವಿನಲ್ಲಿ ವಿಂಬಲ್ಡನ್, ಯುಎಸ್ ಓಪನ್ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ ಸಾನಿಯಾ- ಹಿಂಗಿಸ್, ಇಂಡಿಯನ್ ವೇಲ್ಸ್, ವಿಯಾಮಿ ಹಾಗೂ ಚಾಲೆಸ್ಟನ್ ಪಂದ್ಯಾವಳಿಗಳಲ್ಲಿಯೂ ಪ್ರಶಸ್ತಿ ಪಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು