ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸ್ವಚ್ಚ ಭಾರತ ಅಭಿಯಾನ ಗೀತೆಗೆ ಧ್ವನಿಗೂಡಿಸಲಿರುವ ಸಚಿನ್ ತೆಂಡೂಲ್ಕರ್

ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸ್ವಚ್ಚ ಭಾರತ ಗೀತೆಗೆ ಧ್ವನಿಗೂಡಿಸಲಿದ್ದಾರೆ...

ಶಂಕರ್ ಮಹದೇವನ್, ಸಚಿನ್ ತೆಂಡೂಲ್ಕರ್
Vishwanath S
Updated On : 28 Sept 2015, 4:27 am
ನವದೆಹಲಿ: ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸ್ವಚ್ಚ ಭಾರತ ಗೀತೆಗೆ ಧ್ವನಿಗೂಡಿಸಲಿದ್ದಾರೆ.
ಸ್ವಚ್ಚ ಭಾರತ ಅಭಿಯಾನದ ಅರಿವು ಮೂಡಿಸು ಸಲುವಾಗಿ ಸಿದ್ಧವಾಗುತ್ತಿರುವ ಗೀತೆಗೆ ಧ್ವನಿಯಾಗುತ್ತಿದ್ದು, ಈ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ‘ಸ್ವಚ್ಛ ಭಾರತ ಅಭಿಯಾನ’ದ ಕುರಿತು ಈಗಾಗಲೇ ಎಲ್ಲೇಡೆ ಪ್ರಚಾರ ಮಾಡಲಾಗುತ್ತಿದೆ. ಈ ಸ್ವಚ್ಛ ಭಾರತ ಗೀತೆಯ ಸಾಹಿತ್ಯವನ್ನು ಪರ್ಸೂನ್ ಜೋಷಿ ರಚಿಸಿದ್ದು, ಶಂಕರ್-ಎಸಾನ್-ಲಾಯ್ ಗೀತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಂಕರ್ ಮಹದೇವನ್ ಮತ್ತು ಸಂಗಡಿಗರು ಹಾಡಿರುವ ಈ ಹಾಡಿನ ನಡುವೆ ಬರುವು ಕೆಲವು ಸ್ಫೂರ್ತಿದಾಯಕ ವಾಕ್ಯಗಳಿದ್ದು, ಅದಕ್ಕೆ ಸಚಿನ್ ಧ್ವನಿ ನೀಡಲಿದ್ದಾರೆ.

Advertisement

Advertisement

ಮಹಾತ್ಮ ಗಾಂಧಿಜೀ ಹುಟ್ಟುಹಬ್ಬದ ಅಂಗವಾಗಿ ಅಕ್ಟೋಬರ್ 2 ರಂದು ಈ ಗೀತೆ ಬಿಡುಗಡೆಯಾಗಲಿದ್ದು, ಇದರ ವಿಡಿಯೋ ರೂಪ ಸಹ ಸಿದ್ದವಾಗಿದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement