ಇತ್ತೀಚೆಗಷ್ಟೇ ಭಾರತ ತಂಡದ ವಿರುದ್ಧ ವರ್ಷಾಂತ್ಯದಲ್ಲಿ ನಡೆಯಬೇಕಿರುವ ಪಾಕಿಸ್ತಾನ ಜತೆಗಿನ ದ್ವಿಪಕ್ಷಿಯ ಕ್ರಿಕೆಟ್ ಸರಣಿ ನಡೆಸಲು ಒಪ್ಪದಿದ್ದರೆ ಐಸಿಸಿ ಹಾಗೂ ಎಸಿಸಿ ಟೂರ್ನಿಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದ ಪಿಸಿಬಿ ಅಧ್ಯಕ್ಷ ಶಹಯರ್ಯಾರ್ ಖಾನ್ ಈಗ ಉಲ್ಟಾ ಹೊಡೆದಿದ್ದಾರೆ.
ಮಂಗಳವಾರ ಲಾಹೋರ್‍ನಲ್ಲಿ ಸುದ್ದಿಗಾರರ ಜತೆ ಮಾತನಾಡಿರುವ ಅವರು, ``ಒಂದುವೇಳೆ ಭಾರತ ನಮ್ಮ ಜೊತೆ ಕ್ರಿಕೆಟ್ ಆಡದಿದ್ದರೆ , ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬುದರ ಕುರಿತು ನಾನೊಬ್ಬನೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಪಿಸಿಬಿ ಆಡಳಿತ
ಮಂಡಳಿ, ಪ್ರಧಾನ ಮಂತ್ರಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ತಾವೇ ಎಬ್ಬಿಸಿದ್ದ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.