ಸಿಡ್ನಿ: ಎರಡು ಟೆಸ್ಟ್ ಪಂದ್ಯಗಳ ಸರಣಿಗಾಗಿನ ಆಸ್ಟ್ರೇಲಿಯಾದ ಬಾಂಗ್ಲಾದೇಶ ಪ್ರವಾಸ ಇನ್ನೂ ಅನುಮಾನವೆನ್ನಲಾಗಿದೆ.
ಪ್ರವಾಸಕ್ಕೆ ಮುಂದಾಗಿದ್ದ ಆಸೀಸ್ ಆಟಗಾರರು ಬುಧವಾರ ತಂತಮ್ಮ ಮನೆಗಳಿಗೆ ಹಿಂದಿರುಗಿರುವ ಹಿನ್ನೆಲೆಯಲ್ಲಿ ಸರಣಿ ಮೇಲೆಯೇ ಕರಿನೆರಳು ಆವರಿಸಿದೆ. ಉಗ್ರರ ಸಂಭವನೀಯ ದಾಳಿಯ ಕುರಿತು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಭಾನುವಾರ ಬಾಂಗ್ಲಾಗೆ ಹೊರಟಿದ್ದ ಆಸ್ಟ್ರೇಲಿಯಾ ತಂಡವನ್ನು ತಡೆಹಿಡಿಯಲಾಗಿತ್ತು.
ಪ್ರಸಕ್ತ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡುಬರುತ್ತಿಲ್ಲ ಎಂಬುದು ಮನವರಿಕೆ ಆಗಿರುವುದರಿಂದ ಬಾಂಗ್ಲಾದೇಶ ಪ್ರವಾಸವನ್ನು ನಿಶ್ಚಿತವಾಗಿ ಹೇಳಲಾಗುತ್ತಿಲ್ಲ. ಅಂತಿಮ ನಿರ್ಣಯ ಸದ್ಯದಲ್ಲೇ ಹೊರಬೀಳಲಿದೆ'' ಎಂದಿದೆ ಕ್ರಿಕೆಟ್ ಆಸ್ಟ್ರೇಲಿಯಾ.