ಕ್ರೀಡೆ

ಇಂಡಿಯನ್ ಓಪನ್: ಟೂರ್ನಿಯಿಂದ ಹೊರಬಿದ್ದ ಸೈನಾ

Vishwanath S

ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಲೀ ಕ್ಸುರೈ ವಿರುದ್ಧ ಸೋತ ಭಾರತದ ಷಟ್ಲರ್ ಸೈನಾ ನೆಹ್ವಾಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಸಿರಿ ಪೋರ್ಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 2ನೇ ಗೇಮ್‌ನಲ್ಲಿ ಲಯಕ್ಕೆ ಮರಳಿದ ಸೈನಾ ಅಂತಿಮ ಗೇಮ್‌ನಲ್ಲಿ ನಿರಾಶದಾಯಕ ನಿರ್ವಹಣೆ ತೋರಿ ಚೀನಾದ ಲೀ ಕ್ಸುರೈ ವಿರುದ್ಧದ ಸೋಲು ಕಂಡಿದ್ದಾರೆ.

1 ಗಂಟೆ 12 ನಿಮಿಷಗಳ ನಡೆದ ರೋಚಕ ಪಂದ್ಯದಲ್ಲಿ ವಿಶ್ವ ನಂ. 6 ಆಟಗಾರ್ತಿ ಸೈನಾ 20-22, 21-17, 19-21 ಗೇಮ್‌ಗಳಿಂದ ವಿಶ್ವ ನಂ.2 ಕ್ಸುರೈಗೆ ಶರಣಾದರು.

SCROLL FOR NEXT