ಮುಂಬಯಿ: ಇಂಡಿಯನ್ ಕ್ರಿಕೆಟ್ ಪ್ಲೇಯರ್ ಎಂ.ಎಸ್ ಧೋನಿ, ವಿರಾಟ್ ಕೊಹ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್ ಜೊತೆ ಟೆಲಿವಿಜನ್ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಮೊದಲ ಬಾರಿಗೆ ಈ ಮೂವರು ಮಂದಿ ಒಂದೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಕ್ವೀನ್ಸ್ ಖ್ಯಾತಿಯ ಕಂಗನಾ ಮುಂಬರುವ ಕ್ರಿಕೆಟ್ ಸೀರಿಸ್ ಜಾಹೀರಾತಿನಲ್ಲಿ ಇಂಡಿಯನ್ ಪ್ಲೇಯರ್ ಜತೆಗೆ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.
ರಾಜಕುಮಾರ್ ಇರಾನಿ ಜಾಹೀರಾತನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಕೂಡ ಅನುಷ್ಕಾ ಶರ್ಮಾ, ಪ್ರಿಯಾಂಕಾ ಛೋಪ್ರಾ ಹಾಗೂ ಪ್ರೀತಿ ಜಿಂಟಾ ಕ್ರಿಕೆಟ್ ಆಟಗಾರರ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.