ಶಾಲೆಗೆ ಬೆಂಕಿ ಇಟ್ಟ ಪೋಷಕರು (ಸಂಗ್ರಹ ಚಿತ್ರ) 
ಕ್ರೀಡೆ

ಬಾಲಕಿಗೆ ಲೈಂಗಿಕ ಕಿರುಕುಳ: ಆಕ್ರೋಶಿತ ಪೋಷಕರಿಂದ ಇಡೀ ಶಾಲೆಗೆ ಬೆಂಕಿ

6 ವರ್ಷದ ಪುಟ್ಟ ಬಾಲಕಿಗೆ ಶಾಲಾ ಸಿಬ್ಬಂದಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಾಲಕಿಯ ಪೋಷಕರು ಇಡೀ ಶಾಲೆಗೆ ಬೆಂಕಿ ಇಟ್ಟ ಘಟನೆ ಮಾಲೆಗಾಂವ್ ನಲ್ಲಿ ನಡೆದಿದೆ.

ನಾಸಿಕ್: 6 ವರ್ಷದ ಪುಟ್ಟ ಬಾಲಕಿಗೆ ಶಾಲಾ ಸಿಬ್ಬಂದಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಾಲಕಿಯ ಪೋಷಕರು ಇಡೀ ಶಾಲೆಗೆ ಬೆಂಕಿ ಇಟ್ಟ ಘಟನೆ  ಮಾಲೆಗಾಂವ್ ನಲ್ಲಿ ನಡೆದಿದೆ.

ಮಾಲೆಗಾಂವ್ ನ ಮದರ್ ಆಯೇಶಾ ಪ್ರೈಮರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಬುಧವಾರ ಶಾಲೆಯ ಮಾಲಿಯಾಗಿ ಕೆಲಸ ಮಾಡುತ್ತಿದ್ದ 24 ವರ್ಷದ ಅಜಯ್ ಧಾಂಕೆ  ಎಂಬಾತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಈ ವಿಚಾರವನ್ನು ಬಾಲಕಿ ತನ್ನ ಶಿಕ್ಷಕಿಗೆ ಮತ್ತು ತಾಯಿಗೆ ತಿಳಿಸಿದ್ದಳು. ಬಳಿಕ ತಾಯಿ ಶಾಲೆಗೆ  ಬಂದು ದೂರು ನೀಡಿದ್ದರಾದರೂಶಾಲೆಯಿಂದ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ.

ಹೀಗಾಗಿ ಆಕ್ರೋಶಗೊಂಡ ಪೋಷಕರು ಶಾಲೆಗೆ ಆಗಮಿಸಿ ಪ್ರಾಂಶುಪಾಲರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆಗ ಪ್ರಾಂಶುಪಾಲರು ಭೇಟಿಗೆ ನಿರಾಕರಿಸಿದ್ದರಿಂದ ಭದ್ರತಾ  ಸಿಬ್ಬಂದಿ ಅವರಿಗೆ ಅವಕಾಶ ನೀಡದೇ ಕಳುಹಿಸಿದ್ದರು. ಇದರಿಂದ ಆಕ್ರೋಶಗೊಂಡ ಬಾಲಕಿ ತಂದೆ ತನ್ನ ಒಂದಿಷ್ಟು ಸ್ನೇಹಿತರೊಂದಿಗೆ ಶಾಲೆ ಮೇಲೆ ದಾಳಿ ಮಾಡಿ ಇಡೀ ಶಾಲೆಗೆ  ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಕಿಯ ಕೆನ್ನಾಲಿಗೆಗೆ ಶಾಲೆಯಲ್ಲಿದ್ದ ಪೀಠೋಪಕರಗಳೆಲ್ಲಾ ಭಸ್ಮವಾಗಿದೆ. ಅಲ್ಲದೆ ಸ್ಥಳದಲ್ಲಿದ್ದ ಪೊಲೀಸ್ ವಾಹನಗಳು ಮತ್ತು ಬೈಕ್ ಗಳು ಕೂಡ ಸುಟ್ಟು ಹೋಗಿವೆ. ಈ ವೇಳೆ  ಶಾಲೆಯಲ್ಲಿದ್ದ ಮಕ್ಕಳು ಸಿಬ್ಬಂದಿಗಳು ಸೇರಿದಂತೆ ಎಲ್ಲಾ 500 ಜನರನ್ನು ರಕ್ಷಿಸಲಾಗಿದೆ. ಪ್ರಸ್ತುತ ಆರೋಪಿ ಅಜಯ್ ಧಾಂಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ  ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT