ಕ್ರೀಡೆ

ಸುಲ್ತಾನ್ ಅಜ್ಲಾನ್ ಷಾ ಕಪ್: ಮಲೇಷ್ಯಾ ವಿರುದ್ಧ ಗೆದ್ದರೆ ಫೈನಲ್ ಗೆ ಭಾರತ

Vishwanath S

ಇಪೋ(ಮಲೇಷ್ಯಾ): 25ನೇ ಆವೃತ್ತಿಯ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಮಲೇಷ್ಯಾ ತಂಡವನ್ನು ಎದುರಿಸಲಿದೆ.

ಮಲೇಷ್ಯಾ ವಿರುದ್ಧ ಗೆದ್ದರೆ ಭಾರತ ಫೈನಲ್ ಪ್ರವೇಶಿಸುವ ಕನಸು ನನಸಾಗುತ್ತದೆ. ಕಿವೀಸ್ ವಿರುದ್ಧ ಗೆದ್ದಿದ್ದರೆ ಭಾರತಕ್ಕೆ ಸುಲಭವಾಗಿ ಪ್ರಶಸ್ತಿ ಸುತ್ತಿಗೇರಬಹುದಿತ್ತಾದರೂ ಅವಕಾಶವನ್ನು ಕೈಚೆಲ್ಲಿತ್ತು. ಇದೀಗ ಮಾಡು-ಮಡಿ ಒತ್ತಡದೊಂದಿಗೆ ಸರ್ದಾರ್ ಪಡೆ ಆತಿಥೇಯ ಮಲೇಷ್ಯಾವನ್ನು ಎದುರಿಸಲಿದೆ.

ಭಾರತ ಅಂಕಪಟ್ಟಿಯಲ್ಲಿ 9 ಅಂಕ ಹೊಂದಿದ್ದು ಗೆದ್ದರೆ 12 ಅಂಕ ಸಂಪಾದಿಸಿ ನ್ಯೂಜಿಲೆಂಡ್(11 ಅಂಕ) ತಂಡವನ್ನು ಹಿಂದಿಕ್ಕಿ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಬಹುದು.

SCROLL FOR NEXT