ಕ್ರೀಡೆ

ಏಕದಿನ, ಟಿ20​ಗೆ ಲಂಕಾದ ಸ್ಪಿನ್ ಬೌಲರ್ ರಂಗನ ಹೆರಾತ್ ವಿದಾಯ

Vishwanath S

ಕೋಲಂಬೊ: ಶ್ರೀಲಂಕಾ ತಂಡದ ಸ್ಪಿನ್ ಬೌಲರ್ ರಂಗನ ಹೆರಾತ್ ಏಕದಿನ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

ಸ್ಪಿನ್ ಮಾಂತ್ರಿಕ 38 ವರ್ಷದ ಹೆರಾತ್ ವಿದಾಯ ಘೋಷಿಸಿದ್ದು, ಮುಂದೆ ಟೆಸ್ಟ್ ಪಂದ್ಯದೆಡೆಗೆ ತಮ್ಮ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

ಪ್ರತಿಯೊಬ್ಬ ಕ್ರಿಕೆಟಿಗರು ಒಂದಲ್ಲ ಒಂದು ದಿನ ವಿದಾಯ ಹೇಳಲೇಬೇಕು. ಇದೀಗ ನನ್ನ ಸಮಯ ಬಂದಿದೆ. 2019ರ ವಿಶ್ವಕಪ್ ದೃಷ್ಟಿಯಿಂದ ಯುವ ಪ್ರತಿಭೆಗಳಿಗೆ ಅವಕಾಶ ದೊರಕುವುದು ಅಗತ್ಯ ಎಂದು ತಿಳಿಸಿದ್ದಾರೆ.

ಹೆರಾತ್ 71 ಏಕದಿನ ಪಂದ್ಯದಲ್ಲಿ 74 ವಿಕೆಟ್ ಪಡೆದರೆ, 17 ಟಿ20 ಪಂದ್ಯದಲ್ಲಿ 18 ವಿಕೆಟ್ ಕಬಳಿಸಿದ್ದಾರೆ.

SCROLL FOR NEXT