ಕ್ರೀಡೆ

ರಾಜೀವ್ ಗಾಂಧಿ ಖೇಲ್ ಅಭಿಯಾನಕ್ಕೆ 'ಖೇಲೋ ಇಂಡಿಯಾ' ಎಂದು ಮರುನಾಮಕರಣ

Guruprasad Narayana

ನವದೆಹಲಿ: ಯುಪಿಎ ಸರ್ಕಾರ ಚಾಲನೆ ನೀಡಿದ್ದ ರಾಜೀವ್ ಗಾಂಧಿ ಖೇಲ್ ಅಭಿಯಾನವನ್ನು (ಆರ್ ಜಿ ಕೆ ಎ), ಕ್ರೀಡೆಗಳ ಬೆಂಬಲಕ್ಕಾಗಿರುವ ಖೇಲೋ ಇಂಡಿಯಾ ಯೋಜನೆಯ ಜೊತೆಗೆ ಎನ್ ಡಿ ಎ ಸರ್ಕಾರ ಸೇರಿಸಿದೆ. ಆದುದರಿಂದ ಕಲ್ಯಾಣ ಯೋಜನೆಗಳಿಂದ ರಾಜೀವ್ ಗಾಂಧಿ ಹೆಸರನ್ನು ತೆಗೆಯುವ ತನ್ನ ಕಾರ್ಯಕ್ರಮವನ್ನು ಎನ್ ಡಿ ಎ ಸರ್ಕಾರ ಮುಂದುವರೆಸಿದೆ.

ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲು ಕಲ್ಯಾಣ ಯೋಜನೆಗಳಿಂದ ರಾಜೀವ್ ಗಾಂಧಿ ಹೆಸರನ್ನು ಕೈಬಿಡುತ್ತಿರುವುದು ಇದೇ ಮೊದಲಲ್ಲವಾದ್ದರಿಂದ ಕಾಂಗ್ರೆಸ್ ಇದಕ್ಕೆ ಕಿಡಿಕಾರಿದೆ.

ಈ ಆರೋಪವನ್ನು ತಳ್ಳಿಹಾಕಿರುವ ಕ್ರೀಡಾ ಸಚಿವ ಸರ್ಬಾನಂದ ಸೋನೋವಲ್ "ಇದರಲ್ಲಿ ಯಾವುದೇ ರಾಜಕೀಯ ಇಲ್ಲ" ಎಂದಿದ್ದಾರೆ.

ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನವನ್ನು ಸ್ಥಗಿತಗೊಳಿಸಿ ಯುಪಿಎ ಸರ್ಕಾರ ರಾಜೀವ್ ಗಾಂಧಿ ಖೇಲ್ ಅಭಿಯಾನಕ್ಕೆ ಫೆಬ್ರವರಿ ೨೦೧೪ ರಲ್ಲಿ ಚಾಲನೆ ನೀಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ವಕ್ತಾರ ಟಾಮ್ ವದಕ್ಕನ್ "ಬದಲಾವಣೆ ಸ್ವಾಗತ ಆದರೆ ಇದು ಸರಿಯಾದ ಮಾರ್ಗದಲ್ಲಿರಬೇಕು. ಸಂಸ್ಥೆಗಳ, ಯೋಜನೆಗಳ ಹೆಸರು ಬದಲಿಸುವುದಕ್ಕಿಂತಲೂ ಅಭಿವೃದ್ಧಿ ಕಡೆಗೆ ಅವರು ಗಮನ ಹರಿಸಬೇಕು. ಎರಡು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಅವರಿಗೆ ತೋರಿಸಲಿಕ್ಕೆ ಏನೂ ಇಲ್ಲ. ಅವರ ಸಮಯ ಹತ್ತಿರ ಬರುತ್ತಿದೆ" ಎಂದು ಎನ್ ಡಿ ಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕಳೆದ ವರ್ಷ ಬಜೆಟ್ ನಲ್ಲೂ ಹಲವಾರು ಯೋಜನೆಗಳಿಂದ ರಾಜೀವ್ ಗಾಂಧಿ ಹೆಸರನ್ನು ಕೈಬಿಡಲಾಗಿತ್ತು.

SCROLL FOR NEXT