ಕ್ಯಾಲಿಫೋರ್ನಿಯಾ: ಮಾಜಿ ರೂಪದರ್ಶಿ, ನೀಲಿ ಚಿತ್ರತಾರೆ ಹಾಗೂ ಡಬ್ಲೂಡಬ್ಲೂಇ ಮಹಿಳಾ ಕುಸ್ತಿಪಟು 45 ವರ್ಷದ ಜೋನಿ ಲಾರೆರ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಶಂಕಾಸ್ಪದವಾಗಿ ಜೋನಿ ಸಾವಿಗೀಡಾಗಿದ್ದು, ಅವರು ಮೃತಪಟ್ಟಿರುವ ವಿಷಯವನ್ನು ಅವರದ್ದೇ ಟ್ವೀಟರ್ ನಲ್ಲಿ ಪ್ರಕಟಿಸಲಾಗಿದೆ. ಆಕೆಯ ಸಾವಿನ ಹಿಂದಿನ ಕಾರಣ ತಿಳಿದುಬಂದಿಲ್ಲ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಡಬ್ಲೂಡಬ್ಲೂಇನಲ್ಲಿ ಚಿನಾ ಎಂದೇ ಖ್ಯಾತಿ ಗಳಿಸಿದ್ದ ಜೋನಿ ನಿರಂತರ 231 ದಿನ ಡಬ್ಲೂಡಬ್ಲೂಇ ಕಿರೀಟವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು. ಎರಡು ಬಾರಿ ಇಂಟರ್ ಕಾಂಟಿನೆಂಟಿಲ್ ಟ್ರೋಫಿ ಗೆದ್ದ ವಿಶ್ವದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು, ಅದೇ ರೀತಿ ದ ಸುರ್ರೆಲ್ ಲೈಫ್ ಹಾಗೂ ಸೆಲೆಬ್ರಿಟಿ ರೆಹಾಬ್ ವಿತ್ ಡ್ರ್ಯೂ ಜೋನಿಗೆ ಹೆಸರು ತಂದ ರಿಯಾಲಿಟಿ ಶೋಗಳು.