ನವದೆಹಲಿ: ಈ ವರ್ಷದ ಕೊನೆಯ ಭಾಗದಲ್ಲಿ ನಡೆಯಲಿರುವ ರಿಯೋ ಒಲಂಪಿಕ್ಸ್ ಗೆ ಸದ್ಭಾವನಾ ರಾಯಭಾರಿಯಾಗಿ ಭಾರತದಿಂದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಶನಿವಾರ ನೇಮಕಗೊಂಡಿದ್ದಾರೆ.
ಶಾರುಕ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಕೂಡ ಇದ್ದ ಪಟ್ಟಿಯಿಂದ ಸಲ್ಮಾನ್ ಖಾನ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿ ಭಾರತೀಯ ಒಲಂಪಿಕ್ ಸಂಸ್ಥೆ ತನ್ನ ಮುಖ್ಯ ಕಚೇರಿಯಲ್ಲಿ ಇಂದು ಘೋಷಣೆ ಮಾಡಿದೆ.
ಯುವಕರು ಮತ್ತು ಆಟಗಾರರ ಜೊತೆ ಸಲ್ಮಾನ್ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿರುವುದರಿಂದ ಅವರನ್ನು ಆಯ್ಕೆ ಮಾಡಲಾಗಿದೆ. ೫೦ ವರ್ಷದ ಸಲ್ಮಾನ್ ಯುವಕರ ತಾರೆಯಾಗಿದ್ದು ದೇಶದಾದ್ಯಂತ ದೇಹದಾಢ್ಯ ತರಬೇತಿಯ ಅಭಿಮಾನಿಗಳನ್ನು ಹೊಂದಿದ್ದಾರೆ.
ಅವರ ಇತ್ತೀಚಿನ ಸಿನೆಮಾ 'ಸುಲ್ತಾನ್' ಕೂಡ ಕುಸ್ತಿ ಆಟದ ಬಗೆಗಿದ ಕಥೆ ಹೊಂದಿದೆ. ಇದೇ ಮೊದಲ ಬಾರಿಗೆ ಬಾಲಿವುಡ್ ಸೂಪರ್ ಸ್ಟಾರ್ ಒಬ್ಬರು ಒಲಂಪಿಕ್ಸ್ ಗೆ ಭಾರತೀಯ ಸದ್ಭಾವನಾ ರಾಯಭಾರಿಯಾಗಿ ಆಯ್ಕೆಯಾಗಿರುವುದು.